ದೆಹಲಿಯ ಪಶ್ಚಿಮ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರನಗರದ ಕಟ್ಟಡವೊಂದರ ನೆಲಮಾಳಿಗೆ ಯಲ್ಲಿದ್ದ ಐಎಎಸ್ ಕೋಚಿಂಗ್ ಸೆಂಟರ್ಗೆ ಭಾರಿ ನೀರು ನುಗ್ಗಿದೆ. ಪರಿಣಾಮ ನೀರಿನಲ್ಲಿ ಸಿಕ್ಕಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.
ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಜನರು ಕಂಗಾಲಾಗಿದ್ದಾರೆ. ಖ್ಯಾತ UPSC ಕೋಚಿಂಗ್ ಸೆಂಟರ್ ಒಂದರ ನೆಲಮಳಿಗೆಗೆ ಏಕಾಏಕಿ ಮಳೆ ನೀರು ಲಗ್ಗೆ ಇಟ್ಟ ಪರಿಣಾಮ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. 30 ವಿದ್ಯಾರ್ಥಿಗಳು ಕೊಂಚದರಲ್ಲೇ ಪ್ರಾಣ ಉಳಿಸಿಕೊಂಡಿದ್ದಾರೆ. ರಾಜೇಂದ್ರ ನಗರದ UPSC ಕೋಚಿಂಗ್ ಸೆಂಟರ್ಗೆ ಮಳೆ ನೀರು ನುಗ್ಗಿದ ರಭಸಕ್ಕೆ ನೆಲಮಹಡಿಯಲ್ಲಿದ್ದ ಐಎಎಸ್ ತರಬೇತಿ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಜೀವಂತ ಜಲಸಮಾಧಿ ಆಗಿದ್ದಾರೆ. ಮೂವರ ಪೈಕಿ ಒಬ್ಬರ ಮೃತದೇಹ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.