- ಇಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ
- ಯೋಗಾಸನ ಮಾಡಿದ ಕೇಂದ್ರದ ಭಾರೀ ಮತ್ತು ಉಕ್ಕು ಖಾತೆ ಸಚಿವ ಹೆಚ್ಡಿಕೆ
ಇಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನವದೆಹಲಿಯ ನೋಯ್ಡಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಕೇಂದ್ರದ ಭಾರೀ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಅವರು ಯೋಗಾಸನ ಮಾಡಿದರು.
ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದ ಸಮಸ್ತ ಜನತೆಗೆ ಕೇಂದ್ರದ ಭಾರೀ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಭಾರತದ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಯೋಗವು ಪರಂಪರಾಗತವಾಗಿ ಈ ಪವಿತ್ರ ಭೂಮಿಯಲ್ಲಿ ಬೆಳೆದು, ಉಳಿದುಕೊಂಡು ಬಂದಿರುವ ಅಮೂಲ್ಯ ಜೀವನ ಕಲೆ. ಆರೋಗ್ಯ, ಅಧ್ಯಾತ್ಮ ಎರಡೂ ಮಿಳಿತವಾಗಿರುವ ಯೋಗ ಪ್ರಸ್ತುತ ಇಡೀ ಜಗತ್ತಿನ ಸಂಜೀವಿನಿಯಾಗಿದೆ ಎಂದರು.