ನಿಷೇಧ ನಡುವೆಯೋ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣ ಪಟಾಕಿ ಸಿಡಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಏರ್ ಕ್ವಾಲಿಟಿ ಇಂಡೆಕ್ಸ್ 359 ನಲ್ಲಿ ದಾಖಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಇದು ʻಅತ್ಯಂತ ಕಳಪೆʼ ವಿಭಾಗಕ್ಕೆ ಸೇರಿದ್ದು ಈ ಮೂಲಕ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಲಜಪತ್ ನಗರ್, ಕಲ್ಕಾಜಿ, ಛತ್ತರ್ಪುರ, ಜೌನಾಪುರ್, ಕೈಲಾಶ್ ಪೂರ್ವ, ಸಾಕೇತ್, ರೋಹಿಣಿ, ದ್ವಾರಕಾ, ಪಂಜಾಬಿ ಬಾಗ್, ವಿಕಾಸಪುರಿ, ದಿಲ್ಶಾದ್ ಗಾರ್ಡನ್, ಬುರಾರಿ ಮತ್ತು ಪೂರ್ವ ಮತ್ತು ಪಶ್ಚಿಮ ದೆಹಲಿಯ ಹಲವಾರು ಪ್ರದೇಶಗಳು ಪಟಾಕಿಗಳನ್ನು ಸಿಡಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಇದನ್ನೂ ಓದಿ: ಅ- ಳ; ವರ್ಣಮಾಲೆಯಲ್ಲಿ ಮೂಡಿದ ಕನ್ನಡ..!
ಬೆಳಿಗ್ಗೆ 6 ಗಂಟೆಗೆ, ಬುರಾರಿ ಕ್ರಾಸಿಂಗ್ (394), ಜಹಾಂಗೀರ್ಪುರಿ (387), ಆರ್ಕೆ ಪುರಂ (395), ರೋಹಿಣಿ (385), ಅಶೋಕ್ ವಿಹಾರ್ (384), ದ್ವಾರಕಾ ಸೆಕ್ಟರ್ 8 (375), ಐಜಿಐ ವಿಮಾನ ನಿಲ್ದಾಣ (375), ಮಂದಿರ ಮಾರ್ಗ ( 369), ಪಂಜಾಬಿ ಬಾಗ್ (391), ಆನಂದ್ ವಿಹಾರ್ (395), ಸಿರಿ ಫೋರ್ಟ್ (373) ಮತ್ತು ಸೋನಿಯಾ ವಿಹಾರ್ (392) ಗಾಳಿಯ ಗುಣಮಟ್ಟ ದಾಖಲಾಗಿದೆ.