ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ದೆಹಲಿ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಇಂದು ಚುನಾವಣೆ ಪ್ರಚಾರ ನಡೆಸುತ್ತಿದಾಗ ಯುವಕನೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕನ್ನಯ್ಯ ಕುಮಾರ್ ಚುನಾವಣಾ ಪ್ರಚಾರದ ವೇಳೆ ಹೊರಗೆ ಬರುತ್ತಿದ್ದಂತೆ ಕೈಯಲ್ಲಿ ಹಾರ ಹಿಡಿದ ಯುವಕನೊಬ್ಬ ಅವರ ಕೆನ್ನೆಗೆ ಬಾರಿಸಿದ್ದಾನೆ.
ಪೂರ್ವ ದೆಹಲಿಯ ನ್ಯೂ ಉಸ್ಮಾನ್ ಪುರ ಪ್ರದೇಶದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕನ್ನಯ್ಯಾ ಕುಮಾರ್ ಪ್ರಚಾರದ ವೇಳೆ ಏಳರಿಂದ ಎಂಟು ಜನರಿಂದ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಕಪ್ಪು ಮಸಿ ಎಸೆದಿದ್ದಾರೆ. ನಾಲ್ಕು ಮಹಿಳೆಯರು ಗಾಯಗೊಂಡಿದ್ದಾರೆ.