ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೇಖಾ ಶರ್ಮಾ ಅವರ ದೂರಿನ ಆಧಾರದ ಮೇಲೆ, ಹೊಸ ಕ್ರಿಮಿನಲ್ ಕಾನೂನಿನ ‘ಭಾರತೀಯ ನ್ಯಾಯ ಸಂಹಿತೆ’ಯ ಸೆಕ್ಷನ್ 79 (ಪದ, ಹಾವಭಾವ ಅಥವಾ ಮಹಿಳೆಯ ನಮ್ರತೆಗೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಭಾನುವಾರ ದೆಹಲಿ ಪೊಲೀಸರ ವಿಶೇಷ ಸೆಲ್ ಎಫ್ಐಆರ್ ದಾಖಲಿಸಿದೆ.
121 ಜನರು ಸಾವನ್ನಪ್ಪಿದ ಹತ್ರಾಸ್ ಕಾಲ್ತುಳಿತದಲ್ಲಿ ಗಾಯಗೊಂಡ ಮಹಿಳೆಯರನ್ನು ಮಹಿಳಾ ಆಯೋಗದ ಮುಖ್ಯಸ್ಥರು ಭೇಟಿಯಾದ ವೀಡಿಯೊಗಳ ಕುರಿತು ಕಮೆಂಟ್ ಮಾಡಿದ್ದರು. ಶರ್ಮಾ ಅವರಿಗೆ ಒಬ್ಬರು ಛತ್ರಿ ಹಿಡಿದಿರುವ ವೀಡಿಯೊಗಳ ಕುರಿತು, ಮಹುವಾ ಅವರು ಎಕ್ಸ್ನಲ್ಲಿ “ಪೈಜಾಮಾ” ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ಇದು ವಿವಾದವನ್ನು ಹುಟ್ಟುಹಾಕಿತು, ನಂತರ ಅವರು ಪೋಸ್ಟ್ ಅನ್ನು ಅಳಿಸಿದ್ದಾರೆ ಮತ್ತು ಪೊಲೀಸರು ಅದರ ಬಗ್ಗೆ ಎಕ್ಸ್ನಿಂದ ವಿವರಗಳನ್ನು ಕೇಳಿದ್ದಾರೆ.