ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಬಾರದ ಹಿನ್ನೆಲೆಯಲ್ಲಿಇಂದು ಎನ್ಡಿಎ ಮೈತ್ರಿ ನಾಯಕರು ಸಭೆ ನಡೆಸುತ್ತಿದ್ದಾರೆ.
ನರೇಂದ್ರ ಮೋದಿ ಅಕ್ಕ ಪಕ್ಕದಲ್ಲಿ ಎಂದಿಗೂ ಅಮಿತ್ ಶಾ, ರಾಜ್ನಾಥ್ ಸಿಂಗ್, ಜೆ.ಪಿ ನಡ್ಡಾ ಇರುತ್ತಿದ್ದರು. ಆದರೆ ಇದೀಗ ದಿಡೀರ್ ರಾಜಕೀಯ ಬದಲಾವಣೆ ಆಗಿರುವುದರಿಂದ ಅಮಿತ್ ಶಾ, ರಾಜ್ನಾಥ್ ಸಿಂಗ್, ಜೆ.ಪಿ ನಡ್ಡಾ ಸೈಡ್ಲೈನ್ ಆಗಿದ್ದಾರೆ. ಇದೀಗ ನರೇಂದ್ರ ಮೋದಿಯ ಪಕ್ಕದಲ್ಲಿ ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು, ನಿತಿಶ್ ಕುಮಾರ್, ಏಕನಾಥ್ ಶಿಂದೆ ಕುಳಿತುಕೊಂಡಿದ್ದಾರೆ. ಇಷ್ಟು ದಿನ ಮೋದಿಯ ವರ್ಚಸ್ಸಿನಲ್ಲಿ ಮೆರೆದಾಡುತ್ತಿದ್ದ ಬಿಜೆಪಿ ನಾಯಕರಿಗೆ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಈ ಸಭೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಸಹಕಾರ ನೀಡುವ ಮಹತ್ವದ ಸಭೆಯಾಗಿದ್ದು, ಹಲವಾರು ಬದಲಾವಣೆಗೆ ಕಾರಣವಾಗಿದೆ.