ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕೈಯಿಂದ ನೇಯ್ದ ವಿಶೇಷ ಸಾರಿ ಧರಿಸಿಕೊಂಡು ಬಂದ ಅವರು 2024-25ರ ಬಜೆಟ್ ಮಂಡಿಸಿದ್ದಾರೆ.
ನಿರ್ಮಲಾ ಅವರು ಧರಿಸಿರುವ ಸೀರೆಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ
ನಿರ್ಮಲಾ ಸೀತಾರಾಮನ್ ಬಿಳಿಯ ಬಣ್ಣದ ಮತ್ತು ನೇರಳೆ ಬಣ್ಣದ ಪಟ್ಟಿಯಿರುವ ಸೀರೆಯನ್ನು ಧರಿಸಿದ್ದಾರೆ. ಬಿಳಿಯ ಬಣ್ಣದ ಸೀರೆಯ ಮೇಲೆ ಸಣ್ಣ ಗೋಲ್ಡ್ ಪಟ್ಟಿಯನ್ನು ಕಾಣಬಹುದಾಗಿದೆ.
ನಿರ್ಮಲಾ ಸೀತಾರಾಮನ್ರವರು 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿವರು ಬರೆದ ದಾಖಲೆಯನ್ನು ಮುರಿದಿದ್ದಾರೆ. ಪ್ರತಿ ಬಜೆಟ್ಗೂ ವಿಶೇಷ ಸೀರೆಯನ್ನು ಧರಿಸಿಕೊಂಡು ಬಂದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. 2019 ರಲ್ಲಿ ಸೀತಾರಾಮನ್ರವರು ಬಜೆಟ್ ಮಂಡನೆಗೆ ಗುಲಾಬಿ, ಚಿನ್ನದ ಬಾರ್ಡರ್ ಇರುವ ಮಂಗಳಗಿರಿ ಸೀರೆಯಲ್ಲಿ ಧರಿಸಿದ್ದರು.
2020ರಲ್ಲಿ ಹಳದಿ- ಗೋಲ್ಡ್ ರೇಷ್ಮೆ ಸೀರೆಯನ್ನು ಧರಿಸಿ ಬಂದಿದ್ದರು. ಹಳದಿ ಬಣ್ಣ ಸಮೃದ್ಧಿ ಸಂಕೇತವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ದೇಶದ ಸಂಕೇತವಾಗಿ ಸೀತಾರಾಮನ್ರವರು ಈ ಸೀರೆ ಧರಿಸಿ ಕಂಗೊಳಿಸಿದ್ದರು.
2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ತೆಲಂಗಾಣದಲ್ಲಿ ತಯಾರಿಸಿದ ಸೀರೆಯನ್ನು ಸೀರೆ ಇದಾಗಿತ್ತು. 2022 ರಲ್ಲಿ ಒಡಿಶಾದ ಬೊಮ್ಕೈ ಸೀರೆಯನ್ನು ಧರಿಸಿ ಬಜೆಟ್ ಮಂಡನೆ ಮಾಡಿದ್ದರು. ಸೀರೆಯು ಕಂದು ಬಣ್ಣವನ್ನು ಒಳಗೊಂಡಿತ್ತು.
ಕಂದು ಮತ್ತು ಕೆಂಪು ಬಣ್ಣವನ್ನು ಸಂಯೋಜಿಸಿ ಈ ಸೀರೆಯನ್ನು ತಯಾರಿಸಲಾಗಿತ್ತು.ಇನ್ನು ಕಳೆದ ವರ್ಷ ನಿರ್ಮಲಾ ಸೀತಾರಾಮನ್ರವರು ಕೆಂಪು ಸೀರೆಯನ್ನು ಧರಿಸಿದ್ದರು. ಕಪ್ಪು