ಕೃಷಿ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡಿದ ಕರ್ನಾಟಕ ಕೃಷಿ ಮಿಷನ್ ಮಾಜಿ ಚೇರಮನ್, ನವದೆಹಲಿಯ ಅಗ್ರಿಕಲ್ಚರ್ ರಿಸರ್ಚ ಇನ್ಸ್ಟಿಟ್ಯೂಟ್ ನಿರ್ದೇಶಕ, ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವೈಸ್ ಚೇರಮನ್ ಆಗಿ ಸೇವೆ ಸಲ್ಲಿಸಿದ ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ ನಿಧನ ಹೊಂದಿದ್ದಾರೆ.
ಹೊಸ ಹತ್ತಿ ಬೀಜಗಳ ಸಂಶೋಧನೆ ಸೇರಿ ದಂತೆ ಹಲವಾರು ತಳಿಗಳನ್ನು ಸಂಶೋಧನೆ ಮಾಡಿರುವ ಡಾ.ಎಸ್.ಎ.ಪಾಟೀಲ್ ರಾಯಚೂರಿನಲ್ಲಿ ಕೃಷಿ ವಿವಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಆ ಪೈಕಿ ಮೂವರು ಮಕ್ಕಳು ವಿದೇಶದಲ್ಲಿದ್ದು,ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.