ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನ್ಯಾಯಾಂಗ ಸೇವಾ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ನವೆಂಬರ್ 10 ರಂದು ಅವರು ತಮ್ಮ ಕರ್ತವ್ಯದಿಂದ ಸದಾಕಾಲಕ್ಕೆ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಇಂದೇ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಭಾವುಕ ವಿದಾಯವನ್ನು ಹೇಳಲಾಯ್ತು. ಈ ವೇಳೆ ಮಾತನಾಡಿದ ಸಿಜೆಐ ಚಂದ್ರಚೂಢ ಅವರು. ನಾನು ನನ್ನ ಆರಂಭಿಕ ಸೇವಾವಧಿಯಲ್ಲಿ ಒಬ್ಬ ಯಾತ್ರಿಕನಂತೆ ನಾನು ನ್ಯಾಯಾಲಯಕ್ಕೆ ಬರುತ್ತಿದ್ದೆ. ನಾಳೆಯಿಂದ ನಾನು ಜನರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಆದರೂ ಕೂಡ ಇಷ್ಟು ದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನನಗೆ ಖುಷಿ ಇದೆ. ನಾನು ಸಂತುಷ್ಟ ಎಂದು ಹೇಳಿದ್ದಾರೆ.
ಇದನ್ನು ಓದಿ:ಅಬ್ಬಾ… ನೋಡ ನೋಡ್ತಿದ್ದಂತೆ ನಡೆದ ಹೋಯ್ತು ದುರಂತ!
ನಾಳೆ ಚಂದ್ರಚೂಡ್ ಅವರ ಕಚೇರಿಯಲ್ಲಿ ಬಿಳ್ಕೋಡುಗೆ ಸಮಾರಂಭವನ್ನು ಇಟ್ಟುಕೊಳ್ಳುವ ಸಾಧ್ಯತೆ ಇದೆ. ಯಾವಾಗ ಈ ಕಾರ್ಯಕ್ರಮ ಇಟ್ಟುಕೊಳ್ಳೊಣ ಎಂದು ನನ್ನ ಸಹೋದ್ಯೋಗಿಗಳು ಕೇಳಿದಾಗ ಮಧ್ಯಾಹ್ನ ಎರಡು ಗಂಟೆ ಎಂದು ನಾನು ಹೇಳಿದ್ದೇನೆ. ನಿತ್ಯವೂ ಈ ಸಮಯ ನಮ್ಮ ಪೆಂಡಿಂಗ್ ಕೆಲಸಗಳನ್ನು ಮುಗಿಸಿಕೊಳ್ಳಲು ಅಂತಲೇ ಮೀಸಲು ಇರುತ್ತಿತ್ತು ಹೀಗಾಗಿ ಮಧ್ಯಾಹ್ನ ಎರಡು ಗಂಟೆ ಎಂದು ಹೇಳಿದ್ದೇನೆ. ನಿತ್ಯ ನ್ಯಾಯಾಲಯಕ್ಕೆ ಬರುವುದೇ ಜನರಿಗೆ ನಮ್ಮಿಂದ ಸರಿಯಾದ ಸೇವೆ ಹಾಗೂ ನ್ಯಾಯ ಸಿಗಲಿ ಎಂಬ ಉದ್ದೇಶದೊಂದಿಗೆ ನಾವು ಬರುತ್ತಿದ್ದೇವು. ಇಷ್ಟು ವರ್ಷದ ನನ್ನ ನ್ಯಾಯಾಂಗ ಸೇವೆಯಲ್ಲಿ, ನ್ಯಾಯಾಲಯದಲ್ಲಿ ನನ್ನಿಂದ ಯಾರಿಗಾದರೂ ನೋವು ಆಗಿದ್ದರೇ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.ಜೈನ ಸಮುದಾಯದ ಒಂದು ನುಡಿಗಟ್ಟಾದ ಮಿಚ್ಚಾಮಿ ದುಃಖದಾಮ್ ಅಂದ್ರೆ ನನ್ನ ಎಲ್ಲ ಅಪರಾಧಗಳೂ ಕ್ಷಮಿಸಲ್ಪಡತ್ತವೆ ಎಂದು ಇದನ್ನು ಹೇಳಿ ಇಂದು ನ್ಯಾಯಾಲಯದಿಂದ ಚಂದ್ರಚೂಡ್ ಅವರು ನಿರ್ಗಮಿಸಿದರು.
ಇದನ್ನು ಓದಿ:ವಿಜಯ್ ದೇವರಕೊಂಡ ವಿಡಿಯೋಗೆ ನಾನಾ ಕಮೆಂಟ್ಸ್!
ಇದೇ ಸಮಯದಲ್ಲಿ ಚಂದ್ರಚೂಡ್ ಅವರ ಬಳಿಕ ಸುಪ್ರೀಂಕೋರ್ಟ್ನ 51ನೇ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಲಿರುವ ನವೆಂಬರ್ 11 ರಂದು ಅಧಿಕೃತವಾಗಿ ಆ ಸ್ಥಾನಕ್ಕೆ ಬರಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಾತನಾಡಿ, ನನಗೆ ಚಂದ್ರಚೂಢ ಅವರೊಂದಿಗೆ ಕೆಲಸ ಮಾಡಲು ಅವಕಾಶವೇ ಸಿಗಲಿಲ್ಲ. ಆದ್ರೆ ಅವರು ಇಲ್ಲಿಯವರೆಗೂ ನೀಡಿದ ಸೇವೆ ಮಾತ್ರ ಹೋಲಿಕೆಗೆ ಮೀರಿದ್ದು ಎಂದಿದ್ದಾರೆ.