ನವದೆಹಲಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬಿನ ಅಂಶ ಪತ್ತೆಯಾದ ಬೆನ್ನಲ್ಲೇ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತ್ತು. ಟಿಟಿಡಿಗೆ ನೋಟಿಸ್ ಕೂಡ ನೀಡಲಾಗಿತ್ತು. ಈ ಬೆನ್ನಲ್ಲೇ ಈಗ ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ತುಪ್ಪ ಪೂರೈಸಿದ್ದಂತ ಕಂಪನಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ತುಪ್ಪ ಪೂರೈಸುವ ಕಂಪನಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಸಚಿವಾಲಯವು 4 ಕಂಪನಿಗಳಿಂದ ಮಾದರಿಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ ಒಂದು ಕಂಪನಿಯ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ಇದು ಕಲಬೆರಕೆಯನ್ನು ಬಹಿರಂಗಪಡಿಸಿದೆ ಎಂದಿದೆ.