ನಮ್ಮ ಭಾರತ ದೇಶಕ್ಕೆ ಹೊರ ದೇಶದವರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ನಮ್ಮ ನಾಡಿನ ಸಂಸ್ಕೃತಿ ಅಂದ್ರೆ ವಿದೇಶಿಯರಿಗೆ ಅಚ್ಚು ಮೆಚ್ಚು. ನಮ್ಮ ದೇಶಕ್ಕೆ ಪ್ರವಾಸ ಬರುವುದು ಹೆಚ್ಚಾಗಿ ಈ ರಷ್ಯಾದವರು.. ನಮ್ಮ ಭಾರತದಲ್ಲಿ ಅನೇಕ ವಿದೇಶಿಯರು ನೆಲೆಯುರಿದ್ದಾರೆ. ಫಾರಿನ್ ಹೆಣ್ಣು ಮಕ್ಕಳಂತೂ ನಮ್ಮ ಭಾರತದ ಹುಡುಗರಿಗೆ ಮನಸೋತಿದ್ದಾರೆ.
ರಷ್ಯಾ ಮೂಲದ ಯುವತಿ ಸಂಪ್ರಾದಾಯಿಕ ಸೀರೆಯುಟ್ಟು ಮಾಲ್ ಒಂದರ ಮುಂದೆ ಮದುವೆಯಾಗಲು ಭಾರತೀಯ ವರ ಬೇಕಾಗಿದ್ದಾನೆ ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಷ್ಯಾ ಮೂಲದ “ದಿನಾರಾ” ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಈ ರೀತಿ ವಿಡಿಯೋ ಮಾಡಿ ಅದರಲ್ಲಿ ಸ್ಕ್ಯಾನರ್ ಹಾಕಿದ್ದಾಳೆ. ನನಗೆ ಮೆಸೇಜ್ ಮಾಡಿ ಎಂದು ಸಹ ಪೋಸ್ಟರ್ ನಲ್ಲಿ ಬರೆದು ಕೊಂಡಿದ್ದಾಳೆ. ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.