ರಾಜ್ಯದಲ್ಲಿ ಡೆಂಗ್ಯೂ ಅರ್ಭಟ ಹೆಚ್ಚಾಗಿದ್ದು, ಡೆಂಗ್ಯೂ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕದ ಮೈಸೂರು, ಬೆಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ಇತ್ತೀಚೆಗೆ ಸಂಶೋಧಿಸಲಾಗಿರುವ ಲಸಿಕೆಯ ಪ್ರಯೋಗ ಶೀಘ್ರವೇ ಶುರುವಾಗಲಿದೆ. 18- 60 ವರ್ಷ ವಯೋಮಿತಿಯಲ್ಲಿನ 10,335 ಮಂದಿ ಆರೋಗ್ಯವಂತರು ಪ್ರಯೋಗಕ್ಕೆ ಒಳಗಾಗಿದ್ದಾರೆ. ಔಷಧ ಉದ್ಯಮ ಸಂಸ್ಥೆ ಪನೇಶಿಯಾ ಬಯೋಟೆಕ್ ಅಮೆರಿಕದ ನ್ಯಾಶನಲ್ ಇನ್ಸಿಸ್ಟಿಟ್ಯೂಟ್ ಆಫ್ ಹೆಲ್ತ್ನ ಸಹಭಾಗಿತ್ವದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಜ್ಞಾನಿ ಡಾ.ಶೀಲಾ ಗೋಡಬೋಲೆ ತಿಳಿಸಿದ್ದಾರೆ.
ಪುಣೆಯಲ್ಲಿರುವ ನ್ಯಾಶನಲ್ ಇನ್ಸಿಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಲಸಿಕೆಯ ಪ್ರಯೋಗದ ನೇತೃತ್ವ ವಹಿಸಿವೆ. ಹೀಗಾಗಿ ಡೆಂಗ್ಯೂ ನಿಯಂತ್ರಣಕ್ಕೆ ಹೊಸ ವ್ಯವಸ್ಥೆಯೊಂದು ಸಿಗುವ ಸಾಧ್ಯತೆ ಇದೆ.