ಧಾರವಾಡ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ನಡೆಯಲಿದೆ. ಈ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿದೇಶಿದಲ್ಲಿ ನೆಲೆಸಿರುವ ಮತದಾರರು ಆಗಮಿಸಿದ್ದಾರೆ.
ಭಾನುವಾರ ಧಾರವಾಡದಲ್ಲಿರುವ ಶ್ರೀ ವಿದ್ಯಾ ಗಣಪತಿ ಮಂದಿರದಲ್ಲಿ ವಿದೇಶದಿಂದ ಬಂದಂತಹ ಧಾರವಾಡದ ಮತದಾರರನ್ನು ಬಿಜೆಪಿ ಯುವಮೋರ್ಚಾ ಧಾರವಾಡ ನಗರ 71ರ ಘಟಕದ ವತಿಯಿಂದ ಸನ್ಮಾನಿಸಿದರು. ನರೇಂದ್ರ ಮೋದಿಜಿ ಅವರು ಹಾಗೂ ಪ್ರಲ್ಹಾದ ಜೋಶಿ ಅವರ ಪರವಾಗಿ ಭಾರತಕ್ಕೆ ಮತದಾನ ಮಾಡಲು ಆಗಮಿಸಿದ ವಿದೇಶಿ ಮತದಾರರಿಗೆ ಹುಗುಚ್ಛ ನೀಡಿ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಶಕ್ತಿ ಹಿರೇಮಠ, ಮಾಜಿ ಮಹಾಪೌರರಾದ ಶ್ರೀ ಈರೇಷ ಅಂಚಟಗೇರಿ, ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂದಳಿ, ಮಹಿಳಾಮೋರ್ಚ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಅಳಗವಾಡಿ, ಪಾಲಿಕೆ ಸದಸ್ಯರಾದ ಸುರೇಶ್ ಬೆದರೆ, ಮೋಹನ್ ರಾಮದುರ್ಗ ಸಂಕಲ್ಪ ಕಲ್ಯಾಣಶೆಟ್ಟಿ, ಪವನ ತೀಟೆ, ಉದಯ ಎಂಡಿಗೇರಿ, ವಿಜಯ ಕೊರಲುರ, ಅಭಿಷೇಕ್ ಹಾತರಕಿ, ವಿನಾಯಕ ಸುತಾರ, ನಿಧಿಷ್ ಹಿರೇಮಠ, ನಿರಂಜನ ಗೌಡ್ರ, ಪವನ್ ಗೌಳಿ, ಪುನೀತ್ ಶಿರಹಟ್ಟಿ, ಅಕ್ಷಯ್ ಗಾಮನಗಟ್ಟಿ, ವಿಜೇತ್ ಚಿಕ್ಕಲಗಿ, ಇದ್ದರು.