IPL 2025 ರ ಮೆಗಾ ಹರಾಜು ಅತಿ ಶೀಘ್ರದಲ್ಲೇ ಶುರುವಾಗಲಿದೆ. ಎಲ್ಲಾ ಟೀಂ ಉತ್ಸಾಹವು ಹೆಚ್ಚಾಗುತ್ತಿದ್ದಂತೆ, ಒಬ್ಬ ಯುವ ಕ್ರಿಕೆಟಿಗನನ್ನು ತನ್ನ ತಂಡಕ್ಕೆ ಸೆಳೆಯಲು ಸಿಎಸ್ಕೆ ಕಾದು ಕುಳಿತಿದೆ. ಹೌದು ಅವರೇ ಆಯುಷ್ ಮ್ಹಾತ್ರೆ. 17 ವರ್ಷದ ಮುಂಬೈ ಬ್ಯಾಟರ್, ದೇಶೀಯ ಕ್ರಿಕೆಟ್ನಲ್ಲಿ ಅವರ ಅದ್ಭುತ ಪ್ರದರ್ಶನದೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಮಾಜಿ ನಾಯಕ ಎಂಎಸ್ ಧೋನಿಯವರ ಗಮನ ಸೆಳೆದಿದ್ದಾರೆ. IPL ಹರಾಜು ಸಮೀಪಿಸುತ್ತಿದ್ದಂತೆ, ಆಯುಷ್ ಮ್ಹಾತ್ರೆಗೆ ಬೇಡಿಕೆ ಹೆಚ್ಚಾಗುತ್ತಿದೆ.
ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯಲಿರುವ ಐಪಿಎಲ್ ಹರಾಜಿನ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಮುಂಬೈನ 17 ವರ್ಷದ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಮೇಲೆ ಕಣ್ಣಿಟ್ಟಿದೆ. ಲಕ್ನೋ ದಲ್ಲಿ ನಡೆದ ಇರಾನಿ ಕಪ್ ಮ್ಯಾಚ್ ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ದ ಮುಂಬೈ ಪರ ಮೊದಲ ಮ್ಯಾಚ್ ಆಡಿ 1 ಶತಕ, 1 ಅರ್ಧ ಶತಕದೊಂದಿಗೆ 321 ರನ್ ಗಳಿಸಿ ಭರವಸೆಯ ಆಟಗಾರನೆಂದು ಗುರುತಿಸಿಕೊಂಡಿರುವ ಆಟಗಾರ ಆಯುಷ್ ಮ್ಹಾತ್ರೆ. ಹದಿಹರೆಯದವನಾದ ಆಯುಷ್ ಸಿಎಸ್ಕೆ ಮಾಜಿ ನಾಯಕ ಧೋನಿ ಹಾಗೂ ಸಿಎಸ್ಕೆ ಫ್ರಾಂಚೈಸಿಯ ಪ್ರಮುಖರನ್ನ ಮೆಚ್ಚಿಸಿದ್ದಾರೆ.
ನವೆಂಬರ್ 16 ರಂದು ಕೊನೆಗೊಳ್ಳುವ ರಣಜಿ ಟ್ರೋಫಿಯ ಐದನೇ ಸುತ್ತು, ಮತ್ತು ನವೆಂಬರ್ 23 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯ ನಡುವಿನ ಆರು ದಿನಗಳ ವಿರಾಮದ ಸಮಯದಲ್ಲಿ ಆಯ್ಕೆ ಟ್ರಯಲ್ಸ್ಗೆ ನೊಂದಣಿ ಮಾಡಿಕೊಳ್ಳಲು CSK ಟೀಂ ಮ್ಹಾತ್ರೆ ಅವರನ್ನು ಕೇಳಿದೆ. SMAT ಗಾಗಿ ಆಯುಷ್ ಸೇರಿದಂತೆ ಮುಂಬೈ ತಂಡದ 28-ಸದಸ್ಯರು ಸಂಭವನೀಯ ಆಟಗಾರರಾಗಿದ್ದಾರೆ. ಅಕ್ಟೋಬರ್ 24 ರಂದು MCA ಕಾರ್ಯದರ್ಶಿ ಅಭಯ್ ಹಡಪ್ ಅವರಿಗೆ ಇಮೇಲ್ನಲ್ಲಿ, CSK ಟೀಂ ನ MD ಮತ್ತು CEO ಕಾಸಿ ವಿಶ್ವನಾಥನ್ ಅವರು ಆಯೂಷ್ಗೆ CSK ಟೀಂ ನ ಆಯ್ಕೆ ಪ್ರಯೋಗಗಳಿಗೆ ಹಾಜರಾಗಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಡಬಲ್ ಡೆಕ್ಕರ್ ರೈಲು..?