ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಅವರ ಅಭಿಮಾನಿ ರೇಣುಕಾಸ್ವಾಮಿಯ ಆತ್ಮ ಕಾಡುತ್ತಿದೆ ಎಂದು ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ. ನ್ಯಾಯಾಂಗ ಬಂಧನದಲ್ಲಿರುವ ನಟ, ತನ್ನ ಕನಸಿನಲ್ಲಿ ಮೃತ ಅಭಿಮಾನಿಯಿಂದ ಹಿಂಸೆಗೊಳಗಾದ ಬಗ್ಗೆ ಜೈಲು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ದರ್ಶನ್ ಅವರು ಸಣ್ಣ ಸೆಲ್ ನಲ್ಲಿ ಪ್ರತ್ಯೇಕವಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ದರ್ಶನ್ ನಿದ್ರೆಯಿಲ್ಲದೇ ಹಲವು ರಾತ್ರಿಗಳನ್ನು ಕಳೆದಿದ್ದಾರೆ ಮತ್ತು ಕೆಟ್ಟ ಕನಸುಗಳು ಕೂಡ ಬಿದ್ದಿದೆ ಎನ್ನಲಾಗಿದೆ.
ಅವರು ತಮ್ಮ ಸೆಲ್ ನಲ್ಲಿ ಒಬ್ಬಂಟಿಯಾಗಿರುವುದರಿಂದ ಭಯದಿಂದ ಮಲಗಲು ಸಾಧ್ಯವಾಗದ ಕಾರಣ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಮುಂಜಾನೆ ಮಲಗಿದ್ದಾಗ ಕೂಗುವುದು ಮತ್ತು ಕಿರುಚುವುದನ್ನು ದರ್ಶನ್ ಅವರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ತನ್ನ ಸಹಚರರೊಂದಿಗೆ ಜೈಲಿನಲ್ಲಿದ್ದ ದರ್ಶನ್ ಐಷಾರಾಮಿ ಫೋಟೋಗಳು ಹೊರಬಂದ ನಂತರ, ಅವರನ್ನು ಪ್ರತ್ಯೇಕಿಸಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.
ಅಧಿಕಾರಿಗಳು ಅವರ ಸೌಲಭ್ಯಗಳ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ ಮತ್ತು ನ್ಯಾಯಾಲಯದ ಸಲಹೆಗಳನ್ನು ಅನುಸರಿಸಿ ಮಾತ್ರ ಸೌಲಭ್ಯಗಳನ್ನು ಹೊಂದಲು ಅವಕಾಶ ನೀಡಿದ್ದಾರೆ. ದರ್ಶನ್ ಅವರ ಮಗ ಇತ್ತೀಚೆಗೆ ತಾಯಿ ವಿಜಯಲಕ್ಷ್ಮಿ ಅವರೊಂದಿಗೆ ಜೈಲಿನಲ್ಲಿ ಅವರನ್ನು ಭೇಟಿ ಮಾಡಿದ್ದರು.ಈ ಬೆಳವಣಿಗೆಯ ನಂತರ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗಾಗಿ ಟೆಂಪಲ್ ರನ್ ಕೈಗೆತ್ತಿಕೊಂಡು ವಿಶೇಷ ಪ್ರಾರ್ಥನೆಗಳನ್ನು ನಡೆಸಿದ್ದರು.