ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ – ಖಾತಾ ನೀಡಲು ಫೇಸ್ಲೆಸ್, ಸಂಪರ್ಕ ರಹಿತ ಆನ್ಲೈನ್ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಬಿಬಿಎಂಪಿಯ ರಿಜಿಸ್ಟರ್ಗಳಲ್ಲಿರುವ ಎಲ್ಲ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದರ ಮುಂದಿನ ಭಾಗವಾಗಿ, ಜಿಪಿಎಸ್ನಲ್ಲಿ ಆಸ್ತಿಯ ಅಕ್ಷಾಂಶ, ರೇಖಾಂಶವನ್ನು ಸೆರೆಹಿಡಿಯಲು ಬಿಬಿಎಂಪಿ ಸಿಬ್ಬಂದಿ ಆಸ್ತಿ–ಕಟ್ಟಡಗಳಿಗೆ ಭೇಟಿ ನೀಡಲಿದ್ದಾರೆ. ಇ–ಖಾತಾ ನೀಡಲು ಆಸ್ತಿಯ ಜಿಪಿಎಸ್ ವಿವರಗಳು ಹಾಗೂ ಚಿತ್ರ ಕಡ್ಡಾಯವಾಗಿರುತ್ತದೆ.
‘ಆಸ್ತಿಯ ಜಿಪಿಎಸ್ ಮಾಹಿತಿ ವಿಶಿಷ್ಟ ಗುರುತಾಗಿದೆ. ಇ–ಖಾತಾದ ಎಲ್ಲ ಸೇವೆಗಳು ‘ಫೇಸ್ಲೆಸ್, ಸಂಪರ್ಕರಹಿತ ಮತ್ತು ಆನ್ಲೈನ್ ವಿತರಣೆಯ ಸೌಲಭ್ಯ ಹೊಂದಿರುತ್ತವೆ. ಆದ್ದರಿಂದ, ನಗರದ ಆಸ್ತಿಗಳ ಮಾಲೀಕರು ಬಿಬಿಎಂಪಿ ಸಿಬ್ಬಂದಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.