ನಟ ದರ್ಶನ್ ಜೈಲಿಂದ ರೆಗ್ಯೂಲರ್ ಬೇಲ್ ಪಡೆದು ರಿಲೀಸ್ ಆಗಿದ್ದಾರೆ, ಮೈಸೂರಿನ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಜೈಲು ಸೇರಿದ್ದಾಗ ಸಾಕಷ್ಟು ರೀತಿಯ ಚರ್ಚೆಗಳು ನಡೆದಿದ್ದವು. ದರ್ಶನ್ ಸಹೋದರ ದಿನಕರ್ಗೆ ವಾಸಕ್ಕೆ ಮನೆ ಇಲ್ಲ, ದರ್ಶನ್ ಅವರ ಸ್ವಂತ ತಮ್ಮ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ, ಎಂದು ನಾನಾ ರೀತಿಯಾ ಊಹಾಪೋಹಗಳು ಹರಿದಾಡಿದ್ದವು. ಆದರೆ ಇದೀಗ ದರ್ಶನ್ ಸಹೋದರ ದಿನಕರ್ ತೂಗುದೀಪ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸುಖಾಸುಮ್ಮನೇ ಹೀಗೆ ಓಡಾಡುವ ಸುದ್ದಿಗಳಿಗೆ, ಹಬ್ಬಿಸುವ ವದಂತಿಗಳಿಗೆ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗುತ್ತಾ ಹೇಳಿ? ಅಲ್ಲದೆ ಇಲ್ಲಿವರೆಗೂ ನಮ್ಮ ಬಗ್ಗೆ ಮಾಡಿರುವ ಸುದ್ದಿಗಳಲ್ಲಿ ಎಷ್ಟು ನಿಜ ಇತ್ತು ಅಥವಾ ಇದೆ ಹೇಳಿ, ಮಾತಾಡೋರು ಮಾತನಾಡಲಿ. ಸಮಯ ಬಂದಾಗ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
‘ಜೊತೆ ಜೊತೆಯಲಿ’ ಸಿನಿಮಾ ನಿರ್ಮಿಸಿದ್ದು ನಾನೇ. ಆಗ ನಮ್ಮ ತಾಯಿ ಒಂದು ಮಾತು ಹೇಳಿದರು. ‘ನಿಮ್ಮ ತಂದೆ ಜೀವಪೂರ್ತಿ ದುಡಿದ ದುಡ್ಡನ್ನು ನೀನು ಒಂದೇ ಚಿತ್ರದಲ್ಲಿ ದುಡಿದೆ’ ಅಂತ. ‘ಬುಲ್ ಬುಲ್’, ‘ನವಗ್ರಹ’ ಸೇರಿ ಇಲ್ಲಿವರೆಗೂ ನಾನು 3 ಸಿನಿಮಾ ನಿರ್ಮಿಸಿದ್ದೇನೆ. ಮೂರು ಬ್ಲಾಕ್ ಬಾಸ್ಟರ್ಹಿಟ್, ಹತ್ತು ವರ್ಷಗಳ ಹಿಂದೆಯೇ ಫಾರ್ಚುನರ್ ಕಾರು ತೆಗೆದುಕೊಂಡಿದ್ದೇನೆ. ನಾಳೆಯೇ ನಾನು ಸಿನಿಮಾ ಮಾಡಲ್ಲ ಅಂತ ಮನೆಯಲ್ಲಿ ಕೂತರೂ ರಾಯಲ್ ಆಗಿಯೇ ಬದುಕುತ್ತೇನೆ.
ಈಗ ಹೇಳಿ ನನಗೆ ಸ್ವಂತ ಮನೆ ಮಾಡಿಕೊಳ್ಳೋದು ಕಷ್ಟನಾ? ದರ್ಶನ್ ನನಗೆ ಮನೆ ಕೂಡ ಮಾಡಿಕೊಟ್ಟಿಲ್ಲ ಅಂತಾರಲ್ಲ, . ಅವರಿಗೆ ಒಂದು ಮಾತು ಹೇಳುತ್ತೇನೆ. ಯಾವುದಾದರೂ ಮನೆ, ಪ್ರಾಪರ್ಟಿ ತೋರಿಸಿ ನನಗೆ ಇದು ಬೇಕು ದರ್ಶನ್ ಅಂದರೆ ಐದು ನಿಮಿಷ ಯೋಚನೆ ಕೂಡ ಮಾಡದೆ ನನಗೆ ಕೊಡಿಸುತ್ತಾನೆ ಎಂದು ತಮ್ಮ ವಿರುದ್ದ ಹರಡಿದ್ದ ಊಹಾಪೋಹಗಳಿಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತೆರೆ ಎಳೆದಿದ್ದಾರೆ.
ನಾನು ತುಂಬಾ ಸ್ವಾಭಿಮಾನಿ. ಯಾರ ಮುಂದೆಯೂ ನಾನು ನಾನು ಕೈ ಒಡ್ಡಲ್ಲ. ಇನ್ನೂ ದರ್ಶನ್ ಸೆಲ್ಫ್ ಮೇಡ್ ವ್ಯಕ್ತಿ. ನನ್ನದು ಅದೇ ರಕ್ತ. ನನ್ನ ದುಡಿಮೆಯಲ್ಲಿ ನಾನು ಬದುಕಬೇಕು, ನನ್ನ ದುಡಿಮೆ, ನನ್ನ ಕುಟುಂಬ, ನನ್ನ ಮಕ್ಕಳು ಅಂತ ಯೋಚನೆ ಮಾಡುತ್ತೇನೆ. ದರ್ಶನ್ಗೆ ನಾನೇ ಸಂಭಾವನೆ ಕೊಟ್ಟು ಸಿನಿಮಾ ಮಾಡುವಷ್ಟು ಶಕ್ತಿ ಇದ್ದಾಗ ದರ್ಶನ್ ನನಗೆ ಯಾಕೆ ಆಸ್ತಿ ಮಾಡಿ ಕೊಡಬೇಕು ಅಥವಾ ಕೊಡಿಸಬೇಕು ಹೇಳಿ ಎಂದು ಹೇಳಿದ್ದಾರೆ.
ದರ್ಶನ್ ಅವರು ಯಾವಾಗ ಸಿನಿಮಾ ಶೂಟಿಂಗ್ಗೆ ಹಾಜರಾಗಬಹುದು ಎಂಬುದಲ್ಲೆ ದಿನಕರ್ ಮಾತನಾಡಿದ್ದು, ಈ ಬಗ್ಗೆ ನಾವು ಇನ್ನೂ ಮಾತನಾಡಿಕೊಂಡಿಲ್ಲ. ಯಾಕೆಂದರೆ ಅವರಿಗೆ ಚಿಕಿತ್ಸೆ ಆಗಬೇಕಿದೆ. ಅದಕ್ಕೆ ಒಂದೂವರೆ ತಿಂಗಳು ಬೇಕಾಗುತ್ತದೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ಈಗಲೇ ಆ ಬಗ್ಗೆ ಏನೂ ಹೇಳಲಾರೆ ಎಂದು ಹೇಳಿದ್ದಾರೆ.
ದರ್ಶನ್ ಗೆ ‘ಸರ್ವಾಂತರಯಾಮಿ’ ಚಿತ್ರ ಮಾಡ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ದಿನಕರ್, ದರ್ಶನ್ಗೆ ಬೇರೆ ಮೂರು ಕತೆಗಳನ್ನು ಮಾಡಿಕೊಂಡಿದ್ದೇನೆ. ಯಾಕೆಂದರೆ ‘ಸರ್ವಾಂತರಯಾಮಿ’ ಚಿತ್ರಕ್ಕೆ ಮಾಡಿಕೊಂಡಿದ್ದ ಸಾಕಷ್ಟು ಕತೆ, ದೃಶ್ಯಗಳನ್ನು ಬೇರೆ ಬೇರೆ ಕಡೆ ನಾನೇ ಬಳಸಿಬಿಟ್ಟಿದ್ದೇನೆ. ಹೀಗಾಗಿ ದರ್ಶನ್ ಅವರಿಗೆ ಬೇರೆಯದ್ದೇ ಕತೆ ಮಾಡಿದ್ದೇನೆ ಎಂದರು.