ಲೋಕಲ್ ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳೋದಾದ್ರೆ ನನ್ನ ಜೊತೆಗೆ ಮಾತನಾಡಬೇಡಿ ಎಂದು ಬೆಳಗಾವಿಯಲ್ಲಿ ಮಾಧ್ಯಮಗಳ ಎದುರು ಡಿಸಿಎಂ ಡಿಕೆ ಶಿವಕುಮಾರ್ ಸಿಡಿಮಿಡಿಗೊಂಡಿದ್ದಾರೆ. ಹೌದು .. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಒಂದು ಕಡೆ ಸಿಎಂ ಸೀಟ್ಗಾಗಿ ಪೈಪೋಟಿ ನಡೆಯುತ್ತಿದ್ದರೇ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟಫ್ ಫೈಟ್ ನಡೆಯುತ್ತಿದೆ.
ಸತೀಶ್ ಜಾರಕೀಹೊಳಿ ಅವರು ಮಾಧ್ಯಮಗಳ ಮುಂದೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾಯಿಸಿ ಅಥವ ಇರುವವರನ್ನೇ ಮುಂದುವರೆಸುತ್ತೇವೆ ಎನ್ನುವುದಾದರೂ ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದರು. ಹೀಗಾಗಿ ಅಲ್ಲಿಂದ ಶುರುವಾಗಿತ್ತು ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕೀಹೊಳಿ ನಡುವೆ ವೈಮನಸ್ಸು.
ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ದ ಹರಿಹಾಯ್ದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಅವರು. ನಾನು ನಿಮಗೆ ಉತ್ತರಿಸಲ್ಲ, ನಿಮ್ಮತ್ರ ಬರಲ್ಲ, ನಾವು ನ್ಯಾಷನಲ್ ಇವೆಂಟ್ ಮಾಡ್ತಿದ್ದೀವಿ, ನಿಮಗೂ ಬೇಸಿಕ ಕಾಮನ್ಸೆನ್ಸ್ ಇರಬೇಕು, ಡೋಂಟ್ ಗೋ ಟು ಡಿಸ್ಇಸ್ ಡರ್ಟಿ ಪಾಲಿಟಿಕ್ಸ್, ದಿಸ್ ಇಜ್ ಆಲ್ ಫಾಲ್ಸ್. ನಿಮಗೆ ಯರ್ಯಾರು ಏನು ಹೇಳ್ತಿದ್ದಾರೆ ಎಲ್ಲವೂ ಸುಳ್ಳು, ಸುಳ್ಳಿನ ಕಂಥೆ.
ಕಾಂಗ್ರೆಸ್ ಶಕ್ತಿ ಎಂಥದು ಅಂದ್ರೆ ಎಷ್ಟು ಶ್ರಮ, ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇವೆ. ಈ ಭೂಮಿಯ ನೀರನ್ನೇ ಚಲ್ಲಿ ಇಲ್ಲಿಂದಲೇ ಮನೆಗಳಿಗೆ ಬೆಳಕು ಕೊಟ್ಟಿದ್ದೇವೆ. ಇಲ್ಲಿಂದಲೇ ಕಾರ್ಯಕ್ರಮ ರೂಪಿಸಿದ್ದೇವೆ, ನೀವೆಲ್ಲ ಎಜ್ಯೂಕೆಟೆಡ್ ಜನ, ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ, ಯಾರ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ. ನನಗೆ ಯಾರ ಜೊತೆಯೂ ವೈಯಕ್ತಿಕ ಹಾಗೂ ರಾಜಕೀಯ ದ್ವೇಷ ಇಲ್ಲ. ನಾನು ದೊಡ್ಡ ಅಧ್ಯಕ್ಷ ಸ್ಥಾನದಲ್ಲಿದ್ದೇನೆ, ಎಲ್ಲರಿಗೂ ಒಂದೇ ನ್ಯಾಯ ಕೊಡ್ತಿನಿ ಎಂದು ಹೇಳಿದ್ದಾರೆ.
ನನ್ನ ಕಣ್ಣು, ಕಿವಿ ಎಲ್ಲರಿಗೂ ಸಮಾನವಾಗಿ ತೆಗೆದುಕೊಂಡು ಹೋಗೋದು ನನ್ನ ಡ್ಯೂಟಿ ಅದನ್ನು ನಾನು ಮಾಡ್ತಿನಿ. ಯಾರೋ ಸುಳ್ಳು ಸುಳ್ಳು ಹೇಳುವುದನ್ನು ಕೇಳಿ ಬಂಡಾಯ, ಅವರ ಭೇಟಿ, ಇವರ ಭೇಟಿ ಎಂದು ಹೇಳಬೇಡಿ. ನಮ್ಮ ಕಾರ್ಯಕರ್ತರ ರಕ್ಷಣೆ ಮಾಡುವುದು, ನಮ್ಮ ಸರ್ಕಾರ ಉಳಿಸೋದು ಇಷ್ಟೇ ನನ್ನ ಡ್ಯೂಟಿ. ಉಳಿದ ಯಾವ ವಿಷಯಕ್ಕೂ ನನ್ನ ಹೆಸರು ಉಪಯೋಗಿಸಬೇಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ, ಪಿರೋಜ್ ಸೇಠ್ ಮಧ್ಯೆ ಇರುವ ವೈಮನಸ್ಸಿನ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮ, ಕಾರ್ಯಕರ್ತರು, ಸಚಿವರು, ಶಾಸಕರು ನೀವೆಲ್ಲ ನನಗೆ ಒಂದೇ. ಯಾರ್ಯಾರು ಪಕ್ಷದಲ್ಲಿ ಶಿಸ್ತಿನಿಂದ ಕೆಲಸ ಮಾಡ್ತಾರೆ ಅವರಿಗೆ ತಲೆ ಭಾಗಿ ಸೇವೆ ಮಾಡ್ತಿನಿ ನನಗೆ ಪಕ್ಷ ಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: