ಕೋಲ್ಕತ್ತಾದಲ್ಲಿ ನಡೆದ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವೈದ್ಯರ ಸುರಕ್ಷತೆ ಅತೀ ಮುಖ್ಯವಾಗಿದೆ ಮತ್ತು ಅವರ ಯೋಗ ಕ್ಷೇಮ ರಾಷ್ಟ್ರೀಯ ಹಿತಾಸಕ್ತಿಯ ವಿಷವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ವೈದ್ಯರ ಸುರಕ್ಷತೆಗೆ ಸುಪ್ರೀಂ ಕಾರ್ಯಪಡೆ ತೀವ್ರ ಅಗತ್ಯತೆ ಇದೆ ಎಂದು ಹೇಳಿದೆ.
ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೆಲವು ಸೂಚನೆಗಳನ್ನು ನೀಡಿದ್ದು, ಕಾರ್ಯಪಡೆಯ ಸ್ಥಾಪನೆಯಿಂದ ಸುರಕ್ಷತೆ ಹೆಚ್ಚುವುದು ಅಲ್ಲದೇ ರಾಷ್ಟ್ರದಾದ್ಯಂತ ನೈತಿಕ ಮಾನದಂಡಗಳನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿರುತ್ತವೆ.
ಈಗಾಗಲೇ ವೈದ್ಯರ ಸುರಕ್ಷತೆಗೆ ಸುಪ್ರೀಂ ಕಾರ್ಯಪಡೆ ಸನ್ನದ್ಧವಾಗಿದೆ. ಹತ್ತು ಸದಸ್ಯರನ್ನು ಒಳಗೊಂಡಿರುವ ರಾಷ್ಟ್ರೀಯ ಕಾರ್ಯಪಡೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಹಾಗೂ ಯಾದಗಿರಿ ಮೂಲದವರಾದ ದಿಲ್ಲಿ ಏಮ್ಸ್ ನಿರ್ದೇಶಕ ಎಂ ಶ್ರೀನಿವಾಸ್ ಇವರುಗಳು ಇದ್ದಾರೆ.