ಈಗಿನ ಕಾಲದಲ್ಲಿ ಯುವ ಜನತೆ ಯೋಚನೆ ಮಾಡದೇನೆ ಪ್ರೀತಿಯಲ್ಲಿ ಬೀಳ್ತಾರೆ. ಈ ಸೋಶಿಯಲ್ ಮೀಡಿಯಾದಿಂದ ಅನೇಕರು ಗೊತ್ತು ಗುರಿ ಇಲ್ಲದೆ ಇರುವವರ ಜಾಲಕ್ಕೆ ಬೀಳ್ತಾರೆ. ಇದರಿಂದ ಪ್ರಾಣ ಕಳೆದುಕೊಂಡವರು ಎಷ್ಟೋ ಮಂದಿ. ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಡಿಗೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಯುವಕ ಬಾಲಾಜಿ (23) ಎಂದು ಗುರುತಿಸಲಾಗಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ಅವರ ಕುಟುಂಬ ಇವನ ಆದಾಯದ ಮೇಲೆ ಅಧಾರವಾಗಿತ್ತು. ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಓರ್ವ ಯುವತಿ ಪರಿಚಯವಾಗುತ್ತಾಳೆ. ಇಬ್ಬರ ನಡುವೆ ಸಮಯ ಕಳೆದಂತೆ ಪರಿಚಯ ಪ್ರೀತಿಯಾಗಿ ತಿರುಗಿತ್ತು.
ಇಬ್ಬರು ಒಂದು ವರ್ಷಗಳ ಕಾಲ ಜೊತೆಯಲ್ಲೇ ಸುತ್ತಾಡಿದ್ರು. ಬಾಲಾಜಿ ಯುವತಿಗೆ ಮದುವೆ ಮಾಡಿಕೊಳ್ಳಣ ಎಂದಿದ್ದ ಆಗ ಯುವತಿ ಮನೆಯಲ್ಲಿ ಒಪ್ಪೋದಿಲ್ಲಾ ಮತ್ತೆ ನಾನು ಬೇರೊಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದೇನೆ ಎಂದು ಹೇಳಿದ್ಲು. ಇದರಿಂದ ಮನನೊಂದ ಬಾಲಾಜಿ ಕಾಳುಮಾತ್ರೆ ಸೇವಿಸಿ ಪ್ರಾಣ ಬಿಟ್ಟಿದಾನೆ. ಬಾಲಾಜಿಯನ್ನ ಕಳೆದುಕೊಂಡ ಇವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.