ರಾಯಚೂರು ನಗರದ ವಿದ್ಯಾಶ್ರೀ ಎಂಬುವರು ಕಳೆದ ವರ್ಷ ಮಾರ್ಚ್ 17ರಂದು ಜೊಮ್ಯಾಟೊದಿಂದ ಡೊಮಿನೊಸ್ ಪಿಝ್ಝಾ ತರಿಸಲು ಆನ್ಲೈನ್ ಮೂಲಕ 337 ರೂ. ಪಾವತಿಸಿದ್ದರು . ಎರಡು ತಾಸಿನ ಬಳಿಕ ಪಿಜ್ಜಾ ಸರಬರಾಜು ಮಾಡದಿದ್ದರು ಹಣ ಪಾವತಿಸಿದರು . ಪಿಝ್ಝಾಖರೀದಿಸಿದ ಬಗ್ಗೆ ಗ್ರಾಹಕರ ಮೊಬೈಲ್ಗೆ ಸಂದೇಶ ಬಂದಿತ್ತು. ಇದನ್ನು ಪ್ರಶ್ನಿಸಿದಾಗ ಅಚಾತುರ್ಯದಿಂದ ಆಗಿದೆ ಎಂದು ಹೇಳಿದರು . ಆದಾದ ಮೇಲು ಪಿಜ್ಜಾ ಸರಬರಾಜು ಮಾಡಿರಲಿಲ್ಲ .
ನಗರದ ನಿವಾಸಿ ವಕೀಲರಾದ ವಿದ್ಯಾಶ್ರೀ ಎಂಬವರು 2024 ಮಾ.17 ರಂದು ಸಂಜೆ 7 ಗಂಟೆಗೆ ಡೊಮಿನೊಸ್ ಪಿಜ್ಜಾಕ್ಕಾಗಿ ಜೊಮ್ಯಾಟೊ ಮೂಲಕ 337.45 ರೂಪಾಯಿ ನೀಡಿ ಆರ್ಡರ್ ಮಾಡಿದ್ದರು . ಆದರೆ ಆರ್ಡರ್ ಬರದಕಾರಣ . ಇವರು ಪಿಝ್ಝಾಕ್ಕಾಗಿ ವಿದ್ಯಾಶ್ರೀ ಹಾಗೂ ಅವರ ಮಗಳು ರಾತ್ರಿ 9 ಗಂಟೆಯವರೆಗೆ ಕಾದರೂ ಜೊಮ್ಯಾಟೊದಿಂದ ಪಿಝ್ಝಾ ಆರ್ಡರ್ ಬಂದಿರಲ್ಲಿಲ್ಲ . ಕಾದು ಕಾದು ಸುಸ್ತಾಗಿ ತಾಯಿ ಮತ್ತು ಮಗಳು ಜೊಮ್ಯಾಟೊಗೆ ಕರೆ ಮಾಡಿ ವಿಚಾರಿಸಿದ್ದಾರೆ . ಆಗ ನಿಮ್ಮ ಪಿಝ್ಝಾ ಸಿದ್ದವಾಗುತ್ತಿದೆ ಎಂದು ಉತ್ತ ರ ಬಂದಿದೆ . ಮತ್ತೆ ತಾಯಿ ಮಗಳು ಕಾದಿದ್ದಾರೆ . ಆದರೂ ಪಿಝ್ಝಾ ಬರಲೇ ಇಲ್ಲ. ಆದರೆ ವಿದ್ಯಾಶ್ರೀ ಮೊಬೈಲ್ ಗೆ ಹಣ ಪಾವತಿಸಿರುವ ಮತ್ತು ಪಿಝ್ಝಾ ಸ್ವೀಕರಿಸುವ ಸಂದೇಶ ಬಂದಿದೆ . ಆರ್ಡರ್ ನೀಡದೆ ಈ ಸಂದೇಶವನ್ನೇಕೆ ಕಳುಹಿಸಿದ್ದಾರೆಂದು ಮತ್ತೆ ವಿಚಾರಿಸಿದ್ದಾರೆ . ಆಗ ನಿಮ್ಮ ಆರ್ಡರ್ ನೀಡಲು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ .
ಇದರಿಂದ ಬೇಸತ್ತ ವಿದ್ಯಾಶ್ರೀ ಯವರಿಗೆ ಎದುರಾದ ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ ವ್ಯಥೆಗೆ ಪರಿಹಾರ ಕೋರಿ ರಾಯಚೂರು ಜಿಲ್ಲಾ ಗ್ರಾಹಕರ ದೂರಿನ ಮೇಲೆ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು . ಗ್ರಾಹಕರ ದೂರಿನ ಮೇಲೆ ಪರಿಹಾರ ಸೇವಾ ನ್ಯೂನತೆ ಎಸಗಿದ ಜೊಮ್ಯಾಟೊ ಮತ್ತು ಡೊಮಿನೊಸ್ಗೆ ಜಿಲ್ಲಾಗ್ರಾಹಕರ ಆಯೋಗ 40 ಸಾವಿರ ರೂ. ದಂಡ ವಿಧಿಸಿದೆ .ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು . ಇದನ್ನು ಆಧರಿಸಿ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಯಚೂರಿನ ಜೊಮ್ಯಾಟೊ ಮತ್ತು ಬೆಂಗಳೂರಿನ ಡೊಮಿನೊಸ್ ಕಂಪನಿಗೆ ನೋಟಿಸ್ ನೀಡಿತ್ತು. ಆದರೂ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರಾಯಚೂರು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರ ಕುಮಾರ್ ಹಾಗೂ ಸದಸ್ಯ ಪ್ರಭುದೇವ ಪಾಟೀಲ್ ದೂರುದಾರರ ಮಾನಸಿಕ ವ್ಯಥೆ ಮತ್ತು ಸೇವಾ ನ್ಯೂನತೆ ಆಧರಿಸಿ 40,000 ರೂ. ಪರಿಹಾರ ನೀಡುವಂತೆ ಜ.1, 2025ರಂದು ತೀರ್ಪು ನೀಡಿದ್ದಾರೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಅಣ್ಣಾರಾವ್ ಹಾಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.