2022 ರಲ್ಲಿ ಕೈವ್ನಲ್ಲಿ ಎಎಫ್ಪಿ ಸಂದರ್ಶನ ನಡೆಸಿದ್ದ ರಿಯಾನ್ ವೆಸ್ಲಿ ರೌತ್ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಶಂಕಿತ ಎಂದು ಅಮೆರಿಕದ ಮಾಧ್ಯಮಗಳು ಗುರುತಿಸಿವೆ. ನಿನ್ನೆ ಭಾನುವಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾ ಗಾಲ್ಫ್ ಕೋರ್ಸ್ನ ಗಡಿಯ ಬಳಿ ಎಕೆ-47 ಶೈಲಿಯ ರೈಫಲ್ ನ್ನು ಹೊತ್ತೊಯ್ಯುತ್ತಿದ್ದ ಗನ್ಮ್ಯಾನ್ನ ಮೇಲೆ ಯುಎಸ್ ಸೀಕ್ರೆಟ್ ಸರ್ವೀಸ್ ಏಜೆಂಟ್ ಗುಂಡು ಹಾರಿಸಿ 58 ವರ್ಷದ ರೌತ್ ಅವರನ್ನು ಬಂಧಿಸಲಾಗಿದೆ ಎಂದು ಯುಎಸ್ ಮಾಧ್ಯಮ ತಿಳಿಸಿದೆ.
ಶಂಕಿತ ವ್ಯಕ್ತಿಯು ತಾನು ಅಡಗಿಕೊಂಡಿದ್ದ ಗಿಡದ ಪೊದೆಯಿಂದ ಹೊರಬಂದು ಅಧಿಕಾರಿಗಳು ಪತ್ತೆಹಚ್ಚುವ ಮೊದಲು ಕಪ್ಪು ಕಾರಿನಲ್ಲಿ ಪರಾರಿಯಾಗಿದ್ದರು. ರೌತ್ ಹವಾಯಿಯಲ್ಲಿ ಸ್ವಯಂ ಉದ್ಯೋಗಿಯಾಗಿ ವಸತಿ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದರು, ದೇಶದ ರಾಜಕೀಯ ಮತ್ತು ಪ್ರಸ್ತುತ ಘಟನೆಗಳ ಮೇಲೆ ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದರು, ಕೆಲವೊಮ್ಮೆ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ರನ್ನು ಟೀಕಿಸುತ್ತಿದ್ದರು. ರೌತ್ ಬೆಂಬಲ ವ್ಯಕ್ತಪಡಿಸಿದ ಒಂದು ಕಾರಣವೆಂದರೆ ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಹೋರಾಟ.
ಎಎಫ್ಪಿ ರೌತ್ ಅವರನ್ನು ಏಪ್ರಿಲ್ 2022 ರ ಕೊನೆಯಲ್ಲಿ ಕೈವ್ನಲ್ಲಿ ಸಂದರ್ಶಿಸಿತು, ಅವರು ಬಂದರು ನಗರವಾದ ಮಾರಿಯುಪೋಲ್ನಲ್ಲಿ ಸಿಕ್ಕಿಬಿದ್ದ ಉಕ್ರೇನಿಯನ್ನರನ್ನು ಬೆಂಬಲಿಸುವ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಪುಟಿನ್ ಒಬ್ಬ ಭಯೋತ್ಪಾದಕ ಅವರನ್ನು ಕೊನೆಗೊಳಿಸಬೇಕಾಗಿದೆ ಎಂದು ಬರೆದಿದ್ದರು.