ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಡೊನಾಲ್ಡ್ ಟ್ರಂಪ್ ಇಂದು (ಸೋಮವಾರ) ಭಾರತೀಯ ಕಾಲಮಾನಕ್ಕೆ ಹೋಲಿಸಿದರೆ ರಾತ್ರಿ 10.30ಕ್ಕೆ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದಾಗಿ 5 ವರ್ಷ ಬಳಿಕ ಮತ್ತೆ ಪ್ರಪಂಚದ ಅತಿ ಪ್ರಭಾವಿ ದೇಶವಾದ ಅಮೆರಿಕದಲ್ಲಿ 2ನೇ ಬಾರಿಗೆ ಟ್ರಂಪ್ ಯುಗ ಪ್ರಾರಂಭವಾಗಲಿದೆ. ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ಜಾನ್ ರಾಬರ್ಟ್ಸ್ ಅವರು ಇಂದು ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣ ವಚನದ ನಂತರ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಯ ಮೊದಲ ಭಾಷಣ ಮಾಡುತ್ತಾರೆ. ನಂತರ ಮೊದಲ ಕಾರ್ಯಾದೇಶಗಳಿಗೆ ಸಹಿ ಹಾಕಲಿದ್ದಾರೆ. ಎಲ್ಲ ಮುಗಿದ ನಂತರ ಗಣ್ಯರ ಜತೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ಜನತೆಗೆ ನೀಡಿದ ಭರವಸೆ ಈಡೇರಿಸುವ 100 ಆದೇಶಗಳಿಗೆ ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಧ್ಯಕ್ಷರಾಗುತ್ತಿದ್ದಂತೆ ಸಹಿ ಹಾಕುವ ನಿರೀಕ್ಷೆಯಿದೆ.
ಪದಗ್ರಹಣದ ಬಳಿಕ ಟ್ರಂಪ್ ಅವರ ನಿರ್ಣಯಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಟ್ರಂಪ್ ನಿರ್ಣಯಗಳು ಹಲವು ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. 2ನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ವೇಳೆಯಲ್ಲೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೂ ಸಹ ಹಲವಾರು ರೀತಿಯಲ್ಲಿ ವ್ಯತ್ಯಾಸಗಳು ಉಂಟಾಗಬಹುದು. ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೂ ಎರಡೂ ಇದ್ದು, ಇದರ ಸಮರ್ಥ ನಿರ್ವಹಣೆಯ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ಹೇಗಿರಲಿದೆ ಎಂಬುದನ್ನ ಕಾದು ನೋಡಿ ನಿರ್ಧರಿಸಬೇಕಾಗುತ್ತದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜತೆಗೆ ಮಾತುಕತೆ ನಡೆಸಿರುವ ಟ್ರಂಪ್, ಅಧಿಕಾರವಧಿಯ ಮೊದಲ 100 ದಿನಗಳಲ್ಲಿಯೇ ಚೀನಾ ಭೇಟಿಗೆ ಆಸಕ್ತಿ ತೋರಿದ್ದು, ಭಾರತ ಆಯೋಜಿಸಿರುವ ಕ್ವಾಡ್ ಶೃಂಗ ಸಭೆಯಲ್ಲೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಟ್ರಂಪ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಸಂಬಂಧವಿತ್ತು. ಟ್ರಂಪ್ ಮತ್ತು ಮೋದಿ ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳನ್ನು ಆಯೋಜಿಸಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಿದ್ದರು. ಇದೇ ವಿಧದಲ್ಲಿ ಮುಂದಿನ 4 ವರ್ಷದಲ್ಲಿ ಟ್ರಂಪ್ ಹಾಗೂ ಭಾರತ ಮತ್ತು ಮೋದಿ ಜತೆ ಟ್ರಂಪ್ ಸಂಬಂಧ ಮುಂದುವರಿಯುವ ಸಾಧ್ಯತೆ ಇದೆ.
ಟೊನಾಲ್ಡ್ ಟ್ರಂಪ್ ಅವರು ವಲಸೆ ನೀತಿಗಳನ್ನು ಬದಲಾಯಿಸುತ್ತೀನಿ ಎಂದು ಈಗಾಗಲೇ ಹಲವು ಭಾರೀ ತಿಳಿಸಿದ್ದಾರೆ. ಈ ಒಪಂದು ನಿರ್ದಾರ ಅತಿ ಹೆಚ್ಚು ಪ್ರಭಾವ ಬೀರುವುದು ಭಾರತದ ಐಟಿ ಕ್ಷೇತ್ರದ ಉದ್ಯೋಗಿಗಳ ಮೇಲೆ ಏಕೆಂದರೇ ಐಟಿ ಉದ್ಯಮಿಗಳು ಅತೀ ಹೆಚ್ಚು ಅವಲಂಬಿತವಾಗಿರುವ ಎಚ್-1 ಬಿ ವೀಸಾದ ಮೇಲೆ ಟ್ರಂಪ್ ಅವರ ಈ ನಿರ್ಧಾರ ಪ್ರಭಾವ ಬೀರಬಹುದು.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ವಿದೇಶಿ ಕಾರ್ಮಿಕರ ಮೇಲೆ ಹೆಚ್ಚು ನಿರ್ಬಂದ ಹೇರುವ ಕಾರ್ಯ ಮಾಡಿದ್ದರು. ಈ ಬಾರಿಯೂ ನಿರ್ಬಂಧ ಹೇರಲು ಮುಂದಾದರೆ ಭಾರತೀಯ ಮೂಲದವರಿಗೆ ಅಭದ್ರತೆ ಹೆಚ್ಚಾಗಲಿದೆ. ಜತೆಗೆ ಅಮೆರಿಕಕ್ಕೆ ವಿದ್ಯಾಭ್ಯಾಸದ ನಿಮಿತ್ತ ತೆರಳುವ ವಿದ್ಯಾರ್ಥಿಗಳು ಮತ್ತು ಪದವಿ ಪಡೆದ ಬಳಿಕ ಅಮೆರಿಕದಲ್ಲಿಯೇ ಸೆಟಲ್ ಆಗಲು ಬಯಸುವ ಭಾರತೀಯರ ಮೇಲೆ ಟ್ರಂಪ್ ವಲಸೆ ನೀತಿಗಳು ಅತೀ ಹೆಚ್ಚು ತೊಡಕಾಗುತ್ತವೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B