‘ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ತಮ್ಮ ವತಿ ಮತ್ತು ಅತ್ತೆ- ಮಾವಂದಿರಿಗೆ ಕಿರುಕುಳ ನೀಡಲು ವರದಕ್ಷಿಣೆ ತಡೆ ಕಾಯ್ದೆಯಂಥ ಕಾನೂನು ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ನ್ಯಾಯಾಲಯಗಳು ಇಂಥ ಪ್ರಕರಣಗಳನ್ನು ಕೂಲಂಕ ಷವಾಗಿ ಪರಿಶೀಲಿಸಿ ಇತ್ಯರ್ಥ ಎಂದು ಸುಪ್ರೀಂ ಕೋರ್ಟ ಖಡಕ್ಕಾಗಿ ಹೇಳಿದೆ. ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್, ಪಕ್ಷಿ ತನ್ನ ವಿರುದ್ಧ ಕಿರುಕುಳದ ಸುಳ್ಳು ಕೇಸು ದಾಖಲಿಸಿದ್ದಳು ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ನಡುವೆಯೇ ತೆಲಂಗಾಣದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?:
ಪತ್ನಿಯು ತನ್ನ ಗಂಡ, ಆತನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕ ರಣ ದಾಖಲಿಸಿದ್ದಳು. ಇದನ್ನು ವಜಾಗೊಳಿ ಸಲು ತೆಲಂಗಾಣ ಹೈಕೋರ್ಟು ನಿರಾಕರಿ ಸಿತ್ತು. . ಇದನ್ನು ಪ್ರಶ್ನಿ ಪ್ರಶ್ನಿಸಿ ಪತಿಯ ಕಡೆಯವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ| ಬಿ.ವಿ ನಾಗರತ್ನ, ನ್ಯಾ| ಎನ್. ಕೋಟೇಶ್ವರ ಸಿಂಗ್ ಅವರ ಪೀಠ, ತೆಲಂಗಾಣ ಹೈಕೋರ್ ಆದೇಶವನ್ನು ರದ್ದು ಮಾಡಿದೆ ಹಾಗೂ ಕಿರುಕುಳ ಪ್ರಕರಣಗಳ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನ್ಯಾ| ನಾಗರತ್ನ ಹೇಳಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ವೈವಾಹಿಕ ವಿವಾದಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಇದರ ಜತೆ ಜತೆಗೇ, ಹೆಂಡತಿಯಿಂದ ಪತಿ ಮತ್ತು ಅವನ ಕುಟುಂಬದ ವಿರುದ್ಧ ವೈಯ ಕ್ತಿಕ ದ್ವೇಷ ಸಾಧಿಸಲು ಐಪಿಸಿಯ ಸೆಕ್ಷನ್ 498ಎ ನಂತಹ ನಿಬಂಧನೆಗಳನ್ನು ದುರುವ ಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಸುಖಾಸುಮ್ಮನೇ ಮಾವನ ಮನೆಯವರ ಮೇಲೆ ಸೊಸೆಯಂದಿರು ಆರೋಪ ಮಾಡುವ ನಿದರ್ಶನ ಇವೆ. ಇಂಥ ಆರೋ ಪಗಳನ್ನು ಕೋಡುಗಳು ಕೂಲಂಕಷವಾಗಿ ಪರಿಶೀಲಿಸದೇ ಹೋದರೆ ಕಾನೂನು ದುರುಪಯೋಗಕ್ಕೆ ಕಾರಣ ಆಗುತ್ತದೆ ಹೆಂಡತಿ ಅಥವಾ ಆಕೆಯ ಕುಟುಂಬ ದ್ವೇಗ ಸಾಧಿಸುವ ಪ್ರವೃತ್ತಿಗೆ ಉತ್ತೇಜನ ನೀಡುತ್ತೇ ಎಂದು ನ್ಯಾ| ನಾಗರತ್ನ ಹೇಳಿದರು.