ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೆನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅವಅಉ ನೆನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಭಾರತದ 13ನೇ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರು ಆಡಳಿತ ನಡೆಸಿದ್ದಾರೆ, ಆರ್ಥಿಕ ತಜ್ಞರಾಗಿಯು ಸೇವೆ ಸಲ್ಲಿದ ಕೀರ್ತಿ ಸಿಂಗ್ ಅವರಿಗೆ ಸಲ್ಲುತ್ತದೆ. ಮನಮೋಹನ್ ಸಿಂಗ್ ಅವರ ಸಂಪೂರ್ಣ ಜೀವನ ಚಿತ್ರಣ ಇಲ್ಲಿದೆ ನೋಡಿ..
ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಜನಿಸಿದರು. 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪಾಸ್ ಮಾಡಿದರು. ಅವರ ವಿದ್ಯಾಭ್ಯಾಸದ ಪ್ರಗತಿ ಎಲ್ಲಿಂದ ಎಲ್ಲಿಗೋ ತಲುಪಿಸಿತು. ಪಂಜಾಬ್ ನ ಸಣ್ಣ ಪ್ರಾಂತ್ಯದಲ್ಲಿ ಬೆಳೆದ ಡಾ. ಸಿಂಗ್ ಅವರನ್ನ ಇಂಗ್ಲೆಂಡ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತಲುಪಿಸಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ 1957ರಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯೊಂದಿಗೆ ಆನರ್ಸ್ ಪದವಿಯನ್ನ ಪಡೆದುಕೊಂಡಿದ್ದಾರೆ.
ಆನರ್ಸ್ ಪದವಿಯ ನಂತರ ಮನಮೋಹನ್ ಸಿಂಗ್ ಅವರು 1962ರಲ್ಲಿ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವವನ್ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಪಡೆದುಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರು ಕೇವಲ ಅರ್ಥಶಾಸ್ತ್ರದಲ್ಲಿ ಮಾತ್ರ ಪ್ರತಿಭೆಯನ್ನ ಹೊಂಡಿರಲಿಲ್ಲ ಕೃತಿ ರಚನೆಯಲ್ಲಿಯೋ ಸಹ ತೊಡಗಿಸಿಕೊಂಡಿದ್ದರು. ಅವರು ಬರೆದ ಭಾರತದ ರಫ್ತು ಸ್ಥಿತಿ ಮತ್ತು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ “India’s Export Trends and Prospects for Self-Sustained Growth” ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಗೆ ಹೊಸ ಚೈತನ್ಯ ನೀಡಿತ್ತು.
ಇಷ್ಟೆಲ್ಲಾವನ್ನ ತಿಳಿದುಕೊಂಡಿದ್ದ ಡಾ. ಸಿಂಗ್ ಅವರ ಶೈಕ್ಷಣಿಕ ಜ್ಞಾನವು ಅವರನ್ನು ಪಂಜಾಬ್ ಯುನಿವರ್ಸಿಟಿ ಹಾಗೂ ದೆಹಲಿಯ ಆರ್ಥಿಕ ಶಾಲೆಯೊಂದರಲ್ಲಿ ಪ್ರೋಫೆಸರ್ ಆಗಿ ಸೇವೆಸಲ್ಲಿಸಿದ್ದಾರೆ. ಯು ಎನ್ ಸಿ ಟಿ ಎ ಡಿ ಸಚಿವಾಲಯದಲ್ಲಿಯೋ ಡಾ. ಮನಮೋಹನ್ ಸಿಂಗ್ ಅವರು ಸೇವೆ ಸಲ್ಲಿಸಿದ್ದಾರೆ. ಇಷ್ಟೆಲ್ಲಾ ಅನುಭವದ ಫಲಶೃತಿಯಾಗಿ 1987ರಿಂದ 1990ರವರೆಗೆ ಡಾ. ಮನಮೋಹನ್ ಸಿಂಗ್ ಅವರನ್ನ ಜೀನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಸ್ವಾತಂತ್ರ್ಯ ನಂತರ ಭಾರತದ ಆರ್ಥಿಕತೆಗೆ ಮಹತ್ವದ ತಿರುವು ಕೊಟ್ಟವರು ಡಾ. ಮನಮೋಹನ್ ಸಿಂಗ್ ಅವರು. 1991ರಿಂದ 1996ರವರೆಗೆ ಡಾ. ಮನಮೋಹನ್ ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಆ ಸಮಯದಲ್ಲಿ ಅವರ ನಿರ್ಧಾರಗಳು ಇಂದಿಗೂ ಮಾದರಿಯಾಗಿವೆ.