ಬಿಗ್ ಬಾಸ್ನ ಮಾಜಿ ಸ್ಫರ್ಧಿ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ವಸ್ತು ಬಳಸಿ ಕೃಷಿ ಹೊಂಡದಲ್ಲಿ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಗೆ ಸಹಾಯ ಮಾಡಿದ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತುಮಕೂರಿನ ಖಾಸಗಿ ಫಾರ್ಮ್ನ ಹೌಸ್ ಕೃಷಿ ಹೊಂಡದಲ್ಲಿ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ವಸ್ತು ಬಳಸಿ ಸ್ಪೋಟಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ನ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ಕ್ಯಾಮೆರ ಮ್ಯಾನ್ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಎಂಬುವವರಾಗಿದ್ದಾರೆ. ಇವರ ಪೈಕಿ ಡ್ರೋನ್ ಪ್ರತಾಪ್ ಅವರು ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದರು. ಹೀಗಾಗಿ, ಡ್ರೋನ್ ಪ್ರತಾಪ್ ಅವರ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ನಿನ್ನೆ ಮಧ್ಯರಾತ್ರಿ ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.
ನೀರಿನ ಕೊಳದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಬಳಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ಡ್ರೊನ್ ಪ್ರತಾಪ್ ಅವರನ್ನು ಬಂಧಿಸಿದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಠಾಣಾ ಪೊಲೀಸರು ನಿನ್ನೆ ಡ್ರೋನ್ ಪ್ರತಾಪ್ನನ್ನು ಬೆಂಗಳೂರಿಗೆ ಕರೆದೊಯ್ದು, ಡ್ರೋನ್ ಪ್ರತಾಪ್ನ ಮನೆ, ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಸ್ಥಳ ಮಹಜರು ನಡೆಸಿ. ತಡರಾತ್ರಿ ಡ್ರೋನ್ ಪ್ರತಾಪ್ ಅವರ ಇಬ್ಬರು ಸ್ನೇಹಿತರನ್ನು ಪೊಲೀಸರು ಅರೆಸ್ಟ್ ಮಾಡಿ ಎಲ್ಲರನ್ನೂ ಬೆಂಗಳೂರಿನಿಂದ ತುಮಕೂರಿನ ಮಿಡಿಗೇಶಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ನಡುವೆ ಫಾರ್ಮ್ ಹೌಸ್ ಮಾಲೀಕ ಜಿತೇಂದ್ರ ಜೈನ್ ಎಸ್ಕೇಪ್ ಆಗಿದ್ದಾರೆ.