ದುಬೈ : ಮುಸ್ಲಿಂ ರಾಷ್ಟ್ರವಾದ ಅರಬ್ ದೇಶದಲ್ಲಿ ಮಹಿಳೆಯರು ಬಿಕಿನಿ ತೊಟ್ಟು ಸ್ವಿಮಿಂಗ್ ಫ್ಯಾಷನ್ ಶೋ ನಡೆಸಿ ಸಂಚಲನ ಸೃಷ್ಟಿಸಿದ್ದಾರೆ. ಈ ಹಿಂದೆ ಅರಬ್ನಲ್ಲಿ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆ ಧರಿಸುವ ಸಂಪ್ರದಾಯವಿತ್ತು.
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅರೇಬಿಯನ್ ಕಂಟ್ರಿಯಲ್ಲಿ ಸ್ವಿಮ್ ವೇರ್ ಡ್ರೇಸ್ ಧರಿಸಿ ಫ್ಯಾಷನ್ ಶೋ ನಡಸಿದ್ದಾರೆ. ಯುವತಿಯರು ಬಿಕಿನಿ ತೊಟ್ಟು ಕ್ಯಾಟ್ ವಾಕ್ ಮಾಡಿದ್ದಾರೆ. ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿರುವ ಸೇಂಟ್ ರೆಗಿಸ್ ರೆಡ್ ಸೀ ರೆಸಾರ್ಟ್ನಲ್ಲಿ ಉದ್ಘಾಟನಾ ರೆಡ್ ಸೀ ಫ್ಯಾಶನ್ ವೀಕ್ನ ಎರಡನೇ ದಿನದಂದು ಪ್ರದರ್ಶನವು ನಡೆಯಿತು.
ಮೊರಾಕ್ಕೊದ ಡಿಸೈನರ್ ಯಾಸ್ಮಿನಾ ಕನ್ಜಾಲ್ ಅವರು ವಿನ್ಯಾಸಗೊಳಿಸಿದ ಸ್ವಿಮ್ ವೇರ್ ಸೂಟ್ನಲ್ಲಿ ಮಾಡೆಲ್ಗಳು ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.ಇದಲ್ಲದೇ ಮೊಟ್ಟಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಸೌದಿ ಅರೇಬಿಯಾ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. 27 ವರ್ಷದ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ.