ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅದರ ಬೆನ್ನಲ್ಲೇ ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಅನಂತ್ ಜೋಡಿಗೆ ದುಬೈನ ಪಾಮ್ ಜುಮೈರಾದಲ್ಲಿರುವ ಬರೋಬ್ಬರಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಲಾಗಿದೆ. ಇದು ದುಬೈನ ಅತಿ ದುಬಾರಿ ವಿಲ್ಲಾಗಳ ಪೈಕಿ ಒಂದಾಗಿದ್ದು, ಬರೋಬ್ಬರಿ 3 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. 10 ಬೆಡ್ರೂಂ, ಹಲವು ಕೊಠಡಿ, 70 ಮೀ. ಉದ್ದದ ಖಾಸಗಿ ಬೀಚ್ ಜೊತೆಗೆ ಅತ್ಯಾಕರ್ಷಕ ದುಬೈನ ಪಾಮ್ ಜುಮೈರಾದ ಈ ದ್ವೀಪಸಮೂಹದಲ್ಲಿರುವ ಒಂದು ವಿಲ್ಲಾವನ್ನು ಅನಂತ್ ಮತ್ತು ರಾಧಿಕಾ ದಂಪತಿಗೆ ಉಡುಗೊರೆ ನೀಡಲಾಗಿದೆ. ಒಳಾಂಗಣ ವಿನ್ಯಾಸವನ್ನು ಈ ವಿಲ್ಲಾ ಹೊಂದಿದೆ ಎನ್ನಲಾಗಿದೆ. ಅನಂತ್ ಮತ್ತು ರಾಧಿಕಾ ಜು.12ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ.