- ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶಪರೀಕ್ಷೆಯಫಲಿತಾಂಶ ಬಿಡುಗಡೆ
- ನೀಟ್ ಎಕ್ಸಾಮ್ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಅರ್ಜುನ್ ಕಿಶೋರ್
- ದೇಶದಲ್ಲಿ ಟಾಪ್ 100 ವಿದ್ಯಾರ್ಥಿಗಳ ಲಿಸ್ಟ್ನಲ್ಲಿ ರಾಜ್ಯದ 6 ವಿದ್ಯಾರ್ಥಿಗಳು
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ನೀಟ್ 2024 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 6 ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕಿ ಹಾರಿಸಿದ್ದಾರೆ. ದೇಶದಲ್ಲಿ ಟಾಪ್ 100 ವಿದ್ಯಾರ್ಥಿಗಳ ಲಿಸ್ಟ್ನಲ್ಲಿ ರಾಜ್ಯದ 6 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.
ಯಾರು ಆ ಟಾಪರ್ಸ್
ಅರ್ಜುನ್ ಕಿಶೋರ್ : ರ್ಯಾಂಕ್- 1- 720 ಅಂಕ ಪಡೆದು ದೇಶಕ್ಕೆ ಪ್ರಥಮ ಸ್ಥಾನ
ಇವರು ಟಾಪ್ 100ರಲ್ಲಿ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು
ವಿ.ಕಲ್ಯಾಣ್,
ಶ್ಯಾಮ್ ಶ್ರೇಯಸ್ ಜೋಸೆಫ್
ಅರ್ಜುನ್ ಕಿಶೋರ್
ಪದ್ಮನಾಭ್ ಮೆನನ್
ಪ್ರಜ್ಞಾ ಪಿ.ಶೆಟ್ಟಿ
ಖುಷಿ ಮಗನೂರ್
ಇನ್ನು ನೀಟ್ ರಿಸಲ್ಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಬಿಡುಗಡೆ ಮಾಡಿದ್ದು ಪರೀಕ್ಷೆ ಬರೆದ 24 ಲಕ್ಷ ಅಭ್ಯರ್ಥಿಗಳು ಎನ್ಟಿಎ ನೀಟ್ ಪೋರ್ಟಲ್ನಲ್ಲಿ ಲಾಗಿನ್ ಆಗುವ ಮೂಲಕ ಚೆಕ್ ತಮ್ಮ ರಿಸಲ್ಟ್ ಪರಿಶೀಲನೆ ಮಾಡಬಹುದಾಗಿದೆ.
ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆಯನ್ನು ಮೇ 05 ರಂದು 13 ಭಾಷೆಗಳಲ್ಲಿ ನಡೆಸಲಾಗಿತ್ತು. ದೇಶದ 571 ನಗರಗಳು ಹಾಗೂ ಹೊರಗಿನ 14 ನಗರಗಳು ಸೇರಿದಂತೆ ಒಟ್ಟು 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ಬರೆಯಲು ಒಟ್ಟು 24,06,079 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ನೀಟ್ ಪರೀಕ್ಷೆಗೆ 23,33,297 ವಿದ್ಯಾರ್ಥಿಗಳು ಹಾಜರಾಗಿದ್ದು, 72,782 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇದರಲ್ಲಿ 10,29,154 ವಿದ್ಯಾರ್ಥಿಗಳು, 13,76,831 ವಿದ್ಯಾರ್ಥಿನಿಯರು ಹಾಗೂ 18 ಮಂದಿ ತೃತೀಯ ಲಿಂಗಿಗಳು ಪರೀಕ್ಷೆಯನ್ನು ಬರೆದಿದ್ದರು. ರಿಸಲ್ಟ್ ಬಿಡುಗಡೆ ಮಾಡಲಾಗಿದ್ದು, ಎಕ್ಸಾಂ ಬರೆದು ವಿದ್ಯಾರ್ಥಿಗಳು ವೆಬ್ಸೈಟ್ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಣೆ ಮಾಡಬಹುದು. ಇನ್ನೂ ಉತ್ತರ ಪತ್ರಿಕೆಗಳ ಮರುಪರಿಶೀಲನೆ ಅಥವಾ ಮರು ಮೌಲ್ಯಮಾಪನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ.