- UGC-NEET ಪರೀಕ್ಷಾ ದಿನಾಂಕ ಘೋಷಿಸಿದ ಎನ್ಟಿಎ
- 21 ಆಗಸ್ಟ್ – ಸೆಪ್ಟೆಂಬರ್ 4 ರ ನಡುವೆ ನಡೆಯುವ ಸಾಧ್ಯತೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್, ಜಂಟಿ ಸಿಎಸ್ಐಆರ್ ಯುಜಿಸಿ ನೆಟ್, ಎನ್ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊಸ ದಿನಾಂಕಗಳನ್ನು ಪ್ರಕಟಿಸಿದೆ.
ಯುಜಿಸಿ ನೆಟ್ ಜೂನ್ 2024 ಪರೀಕ್ಷೆಗಳನ್ನು 21 ಆಗಸ್ಟ್ – ಸೆಪ್ಟೆಂಬರ್ 4 ರ ನಡುವೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಜಂಟಿ ಸಿಎಸ್ಐಆರ್ ಯುಜಿಸಿ ನೆಟ್ ಅನ್ನು ಜುಲೈ 25 – 27 ರವರೆಗೆ ಮತ್ತು ಎನ್ಸಿಇಟಿ ಪರೀಕ್ಷೆಗಳನ್ನು ಜುಲೈ 10 ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6 ರಂದು ನಡೆಯಲಿದೆ. ಈ ವರ್ಷ ಯುಜಿಸಿ ನೆಟ್ ಪರೀಕ್ಷೆ ಜೂನ್ ನಲ್ಲಿ ಆಫ್ಲೈನ್ನಲ್ಲಿ ನಡೆದಿತ್ತು. ಆದರೆ ಈ ಬಾರಿ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ.