ಈ ಜಗತ್ತಿನಲ್ಲಿ ದಿನಕ್ಕೊಂದು ವಿಚಿತ್ರ ಹಾಗೂ ವಿಸ್ಮಯ ಘಟನೆಗಳನ್ನು ಕೇಳ್ತಾ ಇರ್ತಿರಾ.. ನೋಡ್ತಾ ಇರ್ತಿವಿ… ಇಂಗ್ಲೆಂಡ್ ನಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ. ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿದ 22 ದಿನಗಳ ನಂತರ ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ.
ಕೈಲಿ ಎಂಬ ಮಹಿಳೆ ಗರ್ಭವತಿ ಇರುವ ವೇಳೆ ಸ್ಕ್ಯಾನಿಂಗ್ ನಲ್ಲಿ ಅವಳಿ ಜವಳಿ ಮಕ್ಕಳಿರುವುದಾಗಿ ತಿಳಿದಿದೆ. ಕೆಲ ದಿನಗಳ ಬಳಿಕ ಆಕೆ ಮೊದಲ ಮಗುವಿಗೆ ಜನ್ಮ ನೀಡಿದ್ದಾಳೆ. 1.1 ಪೌಂಡ್ ತೂಕವಿರುವ ಈ ಮಗು ಹೊಕ್ಕಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ರು.
ಮೊದಲ ಮಗು ಜನಸಿ ಎರಡು ದಿನಗಳು ಕಳೆದರು ಹೆರಿಗೆ ನೋವು ಕಾಣಿಸದೇ ಇರುವ ಕಾರಣ ಕೈಲಿಯನ್ನು ವೈದ್ಯರು ಮನೆಗೆ ಕಳಿಸಿದ್ರು. 22 ದಿನಗಳ ಬಳಿಕ ಕೈಲಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ ವೇಳೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನು ಕಂಡು ವೈದ್ಯರಿಗೆ ಅಚ್ಚರಿಯಾಗಿದೆ.