ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದೆ. ಇನ್ನೆರಡು ವಾರಗಳಲ್ಲಿ ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಟು ಫಿನಾಲೆಯದ್ದೇ ಮಂತ್ರ ನೋಡಿ. ಯಾರನ್ನೇ ನೋಡಿದ್ರೂ ಅಷ್ಟೇನೆ, ಡೈರೆಕ್ಟ್ ಫಿನಾಲೆಗೆ ಹೋಗ್ಬೇಕು ಅಂತ ಆಟ ಆಡುತ್ತಿದ್ದಾರೆ. ಹಾಗಾಗಿಯೇ ಪ್ರತಿ ದಿನದ ಆಟಗಳು ತೀವ್ರತೆ ಪಡೆಯುತ್ತಲೇ ಇವೆ.
ಜಗಳ ಮತ್ತು ಕಿತ್ತಾಟ ಕಾಮನ್ ಆಗಿಯೇ ಇವೆ. ಈಗಾಗಲೇ ಚೈತ್ರಾ ಕುಂದಾಪುರಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಇದೀಗ ಧನರಾಜ್ ಕೂಡ ಮಂಜು ಹಾಗೂ ಗೌತಮಿ ನಡುವೆ ಹರಕೆಯ ಕುರಿ ಆಗಿದ್ದಾರೆ.
ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಟಫ್ ಆಗುತ್ತಿದೆ ಬಿಗ್ಬಾಸ್ ಕೊಡುವ ಟಾಸ್ಕ್. ಇನ್ನೇನು 3 ವಾರಗಳಲ್ಲಿ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಲಿದೆ. ಹೀಗಾಗಿ ಸ್ಪರ್ಧಿಗಳಿಗೆ ಹೊಸ ಹೊಸ ಟಫ್ ಟಾಸ್ಕ್ಗಳನ್ನು ಕೊಡುತ್ತಿದ್ದಾರೆ ಬಿಗ್ಬಾಸ್. ಬಿಗ್ಬಾಸ್ ಕೊಡುತ್ತಿರೋ ಟಾಸ್ಕ್ ನೋಡಿ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ. ಅಲ್ಲದೇ ಈ ಬಾರಿ ಕೊಟ್ಟ ಟಾಸ್ಕ್ನಲ್ಲಿ ಯಾವ ತಂಡ ಗೆಲ್ಲಲಿದೆ ಅನ್ನೋದೆ ಕುತೂಹಲ.
ಹೌದು, ರಿಲೀಸ್ ಆದ ಹೊಸ ಪ್ರೋಮೋದಲ್ಲಿ, ಒಬ್ಬೊಬ್ಬ ಸದಸ್ಯರು ಪೆಟ್ಟಿಗೆಯ ಒಳಗಡೆ ಮಲಗಬೇಕು. ಪೆಟ್ಟಿಗೆ ತುಂಬಾ ನೀರು ತುಂಬಲು ಶುರುವಾಗುತ್ತದೆ. ಇನ್ನೊಬ್ಬ ಸದಸ್ಯ ಪೆಟ್ಟಿಗೆ ಒಳಗಡೆ ತುಂಬಿದ ನೀರನ್ನು ಕಡಿಮೆಗೊಳಿಸುತ್ತಾ ಹೋಗಬೇಕು ಅಂತ ಟಾಸ್ಕ್ವೊಂದನ್ನು ಕೊಟ್ಟಿದ್ದರು. ಆಗ ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿ ಇರುತ್ತಾರೆ.
ಭವ್ಯಾ ಗೌಡ ಹಾಗೂ ಮೋಕ್ಷಿತಾ ಮತ್ತೊಂದು ತಂಡದಲ್ಲಿ ಇರುತ್ತಾರೆ. ಈ ಟಾಸ್ಕ್ ಮೊದಲು ಮಂಜಣ್ಣ ಹಾಗೂ ಗೌತಮಿ ಚರ್ಚೆ ಮಾಡಿದ್ದಾರೆ. ಆಗ ಮಂಜಣ್ಣ ನೀನು ನೀರು ತೆಗಿ ನಾನು ಒಳಗಡೆ ಇರ್ತಿನಿ. ಸಾಯೋದಿಲ್ಲ ಬದುಕುತ್ತೇನೆ ಅಂತ ಹೇಳಿದ್ದಾರೆ. ಆಗ ನೀರನ್ನು ತೆಗೆಯುತ್ತಾ ಹೋಗುವಾಗ ಗೌತಮಿಗೆ ಸುಸ್ತಾಗುತ್ತೆ. ಆದ್ರೆ ನೀರಲ್ಲಿ ಮೀನಾದ್ರೆ ಫಿನಾಲೆಗೆ ಗುಡ್ ಬೈ ಹೇಳಬೇಕಾಗುತ್ತದೆ. ಹೀಗಾಗಿ ಗೌತಮಿ ತಮ್ಮ ಗೆಳೆಯನನ್ನು ಉಳಿಸಲು ಕಷ್ಟ ಪಟ್ಟ ಟಾಸ್ಕ್ನಲ್ಲಿ ಗೆಲ್ಲಲೇಬೇಕು ಅಂತ ಆಡುತ್ತಿದ್ದಾರೆ. ಇನ್ನೂ ಈ ಟಾಸ್ಕ್ನಲ್ಲಿ ಗೆಲುವು ಸಾಧಿಸೋದು ಯಾರು ಅಂತ ಇಂದು ರಾತ್ರಿ ಗೊತ್ತಾಗಲಿದೆ.