‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ಭವ್ಯಾ ಗೌಡ ಅಕ್ಷರಶಃ ಶೈನ್ ಆದರು. ಟಾಸ್ಕ್ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದರು. ತಮ್ಮ ತಂಡದ ಗೆಲುವಿಗೆ ಕಾರಣರಾದರು. ನಾಮಿನೇಷನ್ ವಿಚಾರದಲ್ಲಿ ಅನ್ಯಾಯವಾದರೂ, ತಂಡಕ್ಕೆ ನಿಯತ್ತಾಗಿ ಭವ್ಯಾ ಗೌಡ ಆಟವಾಡಿದರು. ಆದರೆ, ಕ್ಯಾಪ್ಟನ್ ಆಯ್ಕೆ ಮಾಡುವಾಗ ಫಿಕ್ಸಿಂಗ್ ನಡೆದ ಪರಿಣಾಮ ಭವ್ಯಾ ಗೌಡಗೆ ಅನ್ಯಾಯವಾಯ್ತು. ‘ಈ ವಾರ ಆಕ್ಟಿವ್ ಆಗಿದ್ದರೂ, ಪರ್ಫಾಮೆನ್ಸ್ ಕೊಟ್ಟರೂ ಯಾವುದೇ ಪ್ರಯೋಜನ ಇಲ್ಲ’ ಅಂತ ಭವ್ಯಾ ಗೌಡ ಬೇಸರಗೊಂಡಿದ್ದರು. ಇದು ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೆ, ‘ಉತ್ತಮ’ ಕೊಡುವ ಚಟುವಟಿಕೆಯಲ್ಲಿ ಭವ್ಯಾ ಗೌಡಗೆ ಮೋಸ ಆಗದಿರುವುದು ವೀಕ್ಷಕರಿಗೆ ಸಮಾಧಾನ ತಂದಿದೆ.
ಉಗ್ರಂ ಮಂಜು ಅವರು ಈ ವಾರ ಸಾಕಷ್ಟು ಕುತಂತ್ರದ ಆಟ ಆಡಿದ್ದರು. ಈ ಬಗ್ಗೆ ಕೆಲವರಿಗೆ ಬೇಸರ ಇದೆ. ಇಷ್ಟೇ ಅಲ್ಲ, ಭವ್ಯಾ ಗೌಡಗೆ ಮಾತು ಕೊಟ್ಟು ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ಮಂಜುಗೆ ಇಂದು ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ: ‘ನಾನು ಉತ್ತಮ’ ಜೈಲಿನ ಗೋಡೆ ಮೇಲೆ ಕೆತ್ತಿದ ಧನ್ರಾಜ್!
ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಅವರು ಕ್ಯಾಪ್ಟನ್ಸಿ ರೇಸ್ನಲ್ಲಿ ಇದ್ದರು. ಅವರಿಗೆ ವಿರುದ್ಧವಾಗಿ ಮಂಜು ವೋಟ್ ಮಾಡಿದ್ದಾರೆ. ಇದನ್ನು ಭವ್ಯಾ ಬಳಿ ಸಹಿಸಿಕೊಳ್ಳೋಕೆ ಆಗಿಲ್ಲ. ಮತ್ತೊಂದು ಕಡೆಯಲ್ಲಿ ಗೋಲ್ಡ್ ಸುರೇಶ್ ಅವರನ್ನು ಕಳಪೆ ಎಂದು ಮಂಜು ಘೋಷಣೆ ಮಾಡಿದ್ದಾರೆ. ‘ನನ್ನ ತಂಡದವರೇ ನನಗೆ ಕಳಪೆ ಕೊಟ್ರಲ್ಲ’ ಎಂದು ಸುರೇಶ್ ಬೇಸರ ಮಾಡಿಕೊಂಡಿದ್ದಾರೆ. ತಂಡಕ್ಕೋಸ್ಕರ ಆಡಿ, ಗಾಯ ಮಾಡಿಕೊಂಡರೂ ಕೊನೆಗೆ ಸಿಕ್ಕಿದ್ದು ಕೇವಲ ಕಳಪೆ ಎಂದು ಅವರಿಗೆ ಬೇಸರ ಆಗಿದೆ.
ಇದನ್ನು ಓದಿ: ಬಲೂಚಿಸ್ತಾನದಲ್ಲಿ ಉಗ್ರ ದಾಳಿ: 25ಕ್ಕೂ ಹೆಚ್ಚು ಸಾವು !
ಆಟದಲ್ಲಿ ಮಂಜು ಫಿಕ್ಸಿಂಗ್ ಮಾಡಿಕೊಂಡಿದ್ದಕ್ಕೆ ಮೋಕ್ಷಿತಾ ಪೈ, ಗೌತಮಿ ಜಾಧವ್ ಸಿಡಿದೆದ್ದಿದ್ದರು. ಆದರೆ, ಕೊನೆಗೆ ಮಂಜು ಆಟದ ವೈಖರಿಯನ್ನೇ ಮೆಚ್ಚಿ.. ಅವರಿಗೇ ಮೋಕ್ಷಿತಾ ಮತ್ತು ಗೌತಮಿ ‘ಉತ್ತಮ’ ಕೊಟ್ಟಿದ್ದು ಆಶ್ಚರ್ಯಕರ! ಇದರಲ್ಲಿ ಇವರ ಗ್ರೂಪಿಸಂ ಹಾಗೂ ಫಿಕ್ಸಿಂಗ್ ಎದ್ದು ಕಾಣ್ತು!