ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬಹಳಷ್ಟು ಸಮಯದಿಂದ ಸುದ್ದಿಯಾಗಿತ್ತು. ಕಳೆದ ವರ್ಷ ವಿಜಯ್ ಸಂಗೀತಾ ಡಿವೋರ್ಸ್ ಆಗುತ್ತೆ ಎಂದಾಗಲೂ ತ್ರಿಶಾ ಹೆಸರು ಕೇಳಿ ಬಂದಿತ್ತು. ತ್ರಿಶಾ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ GOAT ನಟನೊಂದಿಗೆ ಮಿರರ್ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದು ಈಗ ಮತ್ತೆ ಈ ಸುದ್ದಿ ವೈರಲ್ ಆಗಿದೆ. ಇತ್ತೀಚೆಗೆ ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಅವರ ಮದುವೆಯಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿಇಬ್ಬರೂ ಒಟ್ಟಿಗೆ ಭಾಗಿಯಾಗಿದ್ದಾರೆ . ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ವಿಜಯ್ ಹಾಗು ತ್ರಿಶಾ ಒಟ್ಟಿಗೆ ಗೋವಾಕ್ಕೆ ಪ್ರಯಾಣಿಸಿದ್ದು ಈಗ ಭಾರೀ ಸುದ್ದಿಯಾಗಿದೆ. ಇದೀಗ ಈ ಸುದ್ದಿ ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ್ದಾರೆ ಅಣ್ಣಾಮಲೈ.
ವಿಜಯ್ ಮತ್ತು ತ್ರಿಷಾ ಅವರ ಖಾಸಗಿ ವಿಮಾನ ಪ್ರಯಾಣದ ಫೋಟೋಗಳು ವೈರಲ್ ಆಗಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಈ ಫೋಟೋ ಲೀಕ್ಗೆ ಡಿಎಂಕೆ ಐಟಿ ಸೆಲ್ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ಇಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ವಿಜಯ್ ಮದುವೆಗೆ ಯಾರ ಜೊತೆ ಬೇಕಾದರೂ ಹೋಗಬಹುದು. ಅದು ಅವರ ವೈಯಕ್ತಿಕ ಆಯ್ಕೆ.. ಆದರೆ ಆ ಫೋಟೋ ತೆಗೆದು ವೈರಲ್ ಮಾಡಿದವರು ಯಾರು?” ವಿಜಯ್ ಈಗ ರಾಜಕೀಯಕ್ಕೆ ಬಂದ ಹಿನ್ನೆಲೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮಾಹಿತಿ ತಂತ್ರಜ್ಞಾನ ಘಟಕಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದು ನಿಮ್ಮ (ಡಿಎಂಕೆ) ರಾಜಕೀಯ ಸಂಸ್ಕೃತಿಯ ಮಟ್ಟವೇ? ಡಿಎಂಕೆ ಜನರನ್ನು ಗೌರವಿಸುವುದು ಹೀಗೆಯೇ? ಜನರು ಎಲ್ಲಿ ಬೇಕಾದರೂ ಹೋಗುತ್ತಾರೆ. ಈ ವೇಳೆ ಅವರು ಮದುವೆಗೆ ತೆರಳಿದ್ದರು. ಆದರೆ ನೀವು ಫೋಟೋಗಳನ್ನು ಸಹ ಸೆರೆಹಿಡಿಯುತ್ತೀರಿ ಮತ್ತು ಸೋರಿಕೆ ಮಾಡುತ್ತೀರಿ ಎಂದು ಅಣ್ಣಾಮಲೈ ಡಿಎಂಕೆ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ನಟರೊಂದಿಗೆ ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನದ ಪ್ರಯಾಣಿಕರ ಮ್ಯಾನಿಫೆಸ್ಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ.
ನಟ ವಿಜಯ್ ಹಾಗೂ ತ್ರಿಷಾ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇಬ್ಬರು ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಇವರಿಬ್ಬರ ಸಂಬಂಧದ ಕತೆಗೆ ಇನ್ನಷ್ಟು ಪುಷ್ಠಿ ನೀಡಿತು. ತ್ರಿಷಾ ಹಾಗೂ ವಿಜಯ್ ಪರಸ್ಪರ ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಕಳೆ ಕೆಲ ವರ್ಷಗಳಿಂದಲೂ ಹರಿದಾಡುತ್ತಿದೆ. ಅಸಲಿಗೆ ಈ ಇಬ್ಬರ ಸಂಬಂಧದ ಬಗ್ಗೆ ಹತ್ತು ವರ್ಷದ ಹಿಂದೆಯೂ ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಒಟ್ಟಿಗೆ ಖಾಸಗಿ ವಿಮಾನದಲ್ಲಿ ಟ್ರಾವೆಲ್ ಮಾಡುವ ಚಿತ್ರಗಳು ವೈರಲ್ ಆಗಿದ್ದು, ಈಗ ಮತ್ತೆ ಅದೇ ಸುದ್ದಿಗಳು ಹರಿದಾಡುತ್ತಿವೆ.