ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಯಮುನಾ ಅವರು ಹಲವು ಸಂದರ್ಶನಗಳಲ್ಲಿ ಸ್ಪರ್ಧಿಗಳ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಗೌತಮಿ ಬಗ್ಗೆ ಯಮುನಾ ಅವರು ಸಖತ್ ಗರಂ ಆಗಿಯೇ ಹೇಳಿಕಯೊಂದನ್ನು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಯಮುನಾ ಅವರು ಮಾತನಾಡಿ, ಬಿಗ್ ಬಾಸ್ ಮನೆಯಲ್ಲಿ ಅದರದ್ದೇ ಆದ ರೂಲ್ಸ್ ಇದೆ. ಹೊರಗಿನ ವಿಚಾರ ಹೊರಗೆ ಬರಲೇ ಬಾರದು. ಅದು ದೊಡ್ಡ ನಿಯಮ. ಅಂತಹ ಪರಿಸ್ಥಿಯಲ್ಲಿ ಚೈತ್ರಾ ಜ್ಞಾನ ತಪ್ಪುತ್ತಾರೆ. ಡಾಕ್ಟರ್ ಜತೆ ಮಾತನಾಡುತ್ತಾರೆ. ಮನೆಯೊಳಗೆ ಬರ್ತಾರೆ. ಚೈತ್ರಾ ಅವರಿಂದ ದೊಡ್ಡ ನಿಯಮ ಉಲ್ಲಂಘನೆ ಆಗಿದೆ. ಈ ರೀತಿ ಕೆಲವೊಂದು ನೋಡಿದಾಗ ಬೇಜಾರಗತ್ತೆ ಎಂದರು.
ಯಮುನಾ ಮಾತನಾಡಿ, ತೀರಾ ಬೇಸರದ ಸಂಗತಿ ಎಂದರೆ , ನವೆಂಬರ್ 1ರಂದು ರಾಜ್ಯೋತ್ಸವದ ದಿನ. ಅಂದು ನಾಡಗೀತೆ ಹಾಡುತ್ತಾರೆ. ನಾನು ಗಮನಿಸಿದ ಹಾಗೇ ಮನೆಯ ಎಲ್ಲ ಸದಸ್ಯರೂ, ನಾಡಗೀತೆಯನ್ನು ಹಾಡಿದರು.
ಗೊತ್ತಿರದ ಪ್ಯಾರವನ್ನು ಲಿಪ್ ಸಿಂಕ್ ಮಾಡ್ತಾರೆ. ಅದು ಸಹಜ. ಆದರೆ ನಾನು ಗಮನಿಸಿದ ಹಾಗೇ ಗೌತಮಿ ಅವರು ಬಾಯಿ ಮುಚ್ಚುಕೊಂಡು ನಿಂತಿದ್ದರು. ಹೊರ ದೇಶಕ್ಕೆ ಹೋದಾಗ ಅವರ ದೇಶಭಕ್ತಿ ಗೀತೆ ಗೊತ್ತಿರದ ಕಾರಣ ಸುಮ್ಮನೇ ಇದ್ದರೂ ತಪ್ಪಿಲ್ಲ.
ಆದರೆ ಇಲ್ಲಿನ ಅವಕಾಶ ಬಳಸಿಕೊಳ್ಳುತ್ತಾರೆ, ಧಾರಾವಾಹಿ ಎಲ್ಲ ಮಾಡ್ತಾರೆ. ಆದರೆ ನಾಡಗೀತೆ ಗೊತ್ತಿಲ್ಲ ಅಂದರೆ ಏನರ್ಥ? ಅವರಿಗೆ ಅಷ್ಟೂ ಕೂಡ ಕಲಿಯಲ್ಲೂ ಆಗಲ್ವಾ? ಆ ಮಹಾತಾಯಿಗೆ ಓದಕ್ಕೆ ಬರೆಯೋಕ್ಕೆ ಬರಲ್ಲ. ಹಾಗೇ ಟಾಸ್ಕ್, ಸ್ಕ್ರಿಪ್ಟ್ ಕೂಡ ಅವರು ಇದುವರೆಗೆ ಓದಿಲ್ಲ ಏನಿಲ್ಲ ಎಂದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಗೌತಮಿ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ನಲ್ಲಿ ಸಖತ್ ಆಗಿ ಆಟವನ್ನು ಆಡುತ್ತಿದ್ದಾರೆ. ಟಿಕೆಟ್ ಟು ಫಿನಾಲೆಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಜಿದ್ದಾಜಿದ್ದಿನ ಆಟಕ್ಕಿಳಿದಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಬಿಗ್ ಬಾಸ್ ನಿಮ್ಮಲ್ಲಿ ಟಿಕೆಟ್ ಟು ಫಿನಾಲೆಯಿಂದ ಒಬ್ಬರನ್ನು ಹೊರಗಡೆ ಇಡಬೇಕು ಎಂದಿದ್ದಾರೆ. ಟಾಸ್ಕ್ಗಾಗಿ ಮಂಜು, ಧನರಾಜ್ ಹಾಗೂ ಗೌತಮಿ ಟೀಮ್ ಆಗಿ ಆಟವಾಡ್ತಿದ್ರು.