ಬಿಗ್ ಬಾಸ್ ಸಿಸನ್ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಮನೆಯೊಳಗೆ ಮಾತ್ರ ಅಲ್ಲ ಹೊರಗಡೆಯೂ ಸಖತ್ ಮಿಂಚುತ್ತಿದ್ದಾರೆ. ಹೊರಗಡೆ ಬಂದ ಬಳಿಕ ಫ್ಯಾನ್ಸ್ ಜತೆಗೆ ಸಮಯ ಕಳೆದಿದ್ದಾರೆ. ಮಾತ್ರವಲ್ಲ ಇದೀಗ ಸಖತ್ ಸ್ಟೆಪ್ಸ್ ಬೇರೆ ಇಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಕರ್ನಾಟಕದ ಕ್ರಶ್ ಲಾಯರ್ ಜಗದೀಶ್ ಬಂದಿದ್ದಾರೆ. ಬರ್ತಲೇ ಸಖತ್ ಸ್ಟೆಪ್ಸ್ ಇಟ್ಟಿದ್ದಾರೆ. ಮಾತ್ರವಲ್ಲ ಶಿವಣ್ಣ ಅವರನ್ನುಹೊಗಳಿದ್ದಾರೆ. ಹಾಗೇ ರಕ್ಷಿತಾ ಅವರನ್ನು ನೋಡಿ ಈ ದಿನ ಶಾರುಖ್ ಆಗಿದ್ದಿನಿ ನಾನು ಎಂದು ಹೇಳಿದ್ದಾರೆ. ಆ್ಯಂಕರ್ ಅನುಶ್ರೀ ಅವರೂ ಕೂಡ ಜಗದೀಶ್ ಅವರ ಜತೆ ಹೆಜ್ಜೆ ಹಾಕಿದ್ದಾರೆ. ಮಾತ್ರವಲ್ಲ 40ರಲ್ಲೂ ನೀವು ತುಂಬ naughty ಅಂತ ರಕ್ಷಿತ ಅವರು ಲಾಯರ್ ಜಗದೀಶ್ ಅವರನ್ನು ಕಾಲೆಳೆದಿದ್ದಾರೆ.
ಡಿಕೆಡಿಯಲ್ಲಿ ಈ ಬಾರಿ ಹಲವು ಹಳೆಯ ಸಾಂಗ್ಗಳನ್ನು ರಿ ಕ್ರಿಯೇಟ್ ಮಾಡಲಾಗುತ್ತಿದೆ. ರಕ್ಷಿತಾ ಪ್ರೇಮ್, ಶ್ರೀಮುರಳಿ ಸೇರಿದಂತೆ ಇತರರ ಚಿತ್ರಗಳನ್ನ ಹಿಟ್ ಹಾಡುಗಳನ್ನೆ ರೀ-ಕ್ರಿಯೆಟ್ ಮಾಡಲಾಗಿದೆ.