ಖ್ಯಾತ ಸೌತ್ ನಿರ್ಮಾಪಕರಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್ ಸಿಕ್ಕಿದೆ. ನಿರ್ಮಾಪಕ ದಿಲ್ ರಾಜು ಹೈದರಾಬಾದ್ ಮನೆ ,ಕಚೇರಿ ಹೊರತಾಗಿ ಅವರ ಸಂಬಂಧಿಕರ 8 ಸ್ಥಳಗಳಲ್ಲಿ ಮೇಲೆ IT ಅಧಿಕಾರಿಗಳ ದಾಳಿಯಾಗಿದೆ.
ಇತ್ತೀಚೆಗೆ ರಿಲೀಸ್ ಆದ ಗೇಮ್ ಚೇಂಜರ್ ಚಿತ್ರದ ನಿರ್ಮಾಪಕ ರಾಮ್ ಚರಣ್ ತೇಜಾ ನಟನೆಯ, ಶಂಕರ್ ನಿರ್ದೇಶನದ ಸಿನಿಮಾ. ಪವನ್ ಕಲ್ಯಾಣ್ ಗೂ ಚಿತ್ರದ ನಿರ್ಮಾಣ ಮಾಡಿದ್ದ ದಿಲ್ ರಾಜು ವಕೀಲ್ ಸಾಬ್ ನಿಂದ ಬಂದ ಹಣ. ನನ್ನ ಜನಸೇನಾ ಪಕ್ಷಕ್ಕೆ ಸಹಾಯ ಮಾಡುತ್ತೇನೆ. ಅದನ್ನ ಇತ್ತೀಚೆಗೆ ಬಹಿರಂಗವಾಗಿ ಹೇಳಿಕೊಂಡಿದ್ದ DCM ಪವನ್ ಕಲ್ಯಾಣ್. ವಕೀಲ್ ಸಾಬ್ ಚಿತ್ರದಿಂದ ಬಂದ ಹಣ ನನ್ನ ಪಕ್ಷಕ್ಕೆ ಇಂಧನವಾಗಿತ್ತು ಎಂದಿದ್ದ ಪವನ್.
ದಿಲ್ ರಾಜು, ಅವರ ನಿಜವಾದ ಹೆಸರು ವೆಲಂಕುಚ ವೆಂಕಟ ರಮಣ ರೆಡ್ಡಿ. ಅವರು ಪ್ರಮುಖ ತೆಲುಗು ಸಿನಿಮಾ ವಿತರಕ ಮತ್ತು ನಿರ್ಮಾಪಕ. ಅವರು ಪ್ರಮುಖ ನಿರ್ಮಾಣ ಕಂಪನಿಯಾದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅನ್ನು ಹೊಂದಿದ್ದಾರೆ. ಈ ಒಂದು ಪ್ರೊಡಕ್ಷನ್ ಅಡಿಯಲ್ಲಿ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.ಅವರನ್ನು ಇತ್ತೀಚೆಗೆ ರಾಜ್ಯ ಸರ್ಕಾರವು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿತು. ಜನವರಿಯಲ್ಲಿ ದಿಲ್ ರಾಜು ಎರಡು ಚಿತ್ರಗಳನ್ನು ನಿರ್ಮಿಸಿದ್ದರು.
ಸೌತ್ನ ಖ್ಯಾತ ನಿರ್ಮಾಪಕರ ಮನೆ, ಕಚೇರಿಗಳಲ್ಲಿ ಐಟಿ ಅಧಿಕಾರಿಗಳ ದಾಳಿಯಾಗಿದೆ. ಒಟ್ಟು 55 ತಂಡಗಳೊಂದಿಗೆ ಬಂದಿರುವ ಐಟಿ ಅಧಿಕಾರಿಗಳು ಏಕಕಾಲಕ್ಕೆ 8 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ದಿಲ್ ರಾಜು, ಅವರ ಪುತ್ರಿ, ಸಹೋದರ ಹಾಗೂ ಸಂಬಂಧಿಕರ ಮನೆಗಳಲ್ಲೂ ಈ ತಪಾಸಣೆ ನಡೆಸಲಾಗುತ್ತಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc