ರಾಮಾಯಣ ದಂಗಲ್ ಸಿನಿಮಾ ಖ್ಯಾತಿಯ ನಿತೇಶ್ ತಿವಾರಿ ಡೈರೆಕ್ಷನ್ ನಲ್ಲಿ ಬರ್ತಿರೋ ಬಾಲಿವುಡ್ ನ ಬಹುನಿರೀಕ್ಷಿತ ಬಹುಕೋಟಿ ಎಪಿಕ್ ಮೂವಿ. ಬಾಲಿವುಡ್ ನಟ ರಣ್ ಬೀರ್ ಕಪೂರ್ ರಾಮನಾಗಿ, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಬಣ್ಣ ಹಚ್ಚಿರೋ ರಾಮಾಯಣ ಸದ್ಯ ಎಲ್ಲರ ಗಮನ ಸೆಳೆದಿದೆ.
ಶೂಟಿಂಗ್ ಕೂಡ ಭರದಿಂದ ಸಾಗ್ತಿದ್ದು ನಿರ್ಮಾಣ ಸಂಸ್ಥೆ 2026ರ ದೀಪಾವಳಿಗೆ ಒಂದು ಭಾಗ ಮತ್ತು 2027ರ ದೀಪಾವಳಿಗೆ ಎರಡನೇ ಭಾಗ ಹೀಗೆ ಎರಡೆರಡು ಭಾಗಗಳಲ್ಲಿ ಈ ರಾಮಾಯಣವನ್ನ ರಿಲೀಸ್ ಮಾಡಲು ಯೋಜನೆ ರೂಪಿಸಿದೆ. ಇದೆಲ್ಲವೂ ಗೊತ್ತಿರೋ ವಿಷಯವೇ ಆದ್ರೂ, ಸದ್ಯ ನಮ್ಮ ಪ್ರಧಾನಿ ನರೇಂದ್ರ ಮೋದಿ, ನಮ್ಮ ಯಶ್ ನಟನೆಯ ರಾಮಾಯಣಕ್ಕೆ ಚೆಕ್ ಮೇಟ್ ಇಟ್ಟಿದ್ದಾರೆ. ಅದೇ ‘ರಾಮಾಯಣ- ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’.
ಯಶ್- ರಣ್ಬೀರ್ ರಾಮಾಯಣಕ್ಕೂ ಮೊದಲೇ ಮತ್ತೊಂದು ರಾಮಾಯಣ ಸಿನಿಮಾ ಬೆಳ್ಳಿಪರದೆ ಬೆಳಗಲು ಸಜ್ಜಾಗಿದೆ. ವಿಶೇಷ ಅಂದ್ರೆ ಈ ರಾಮಾಯಣಕ್ಕೆ ಸ್ವತಃ ಪ್ರೈಮ್ ಮಿನಿಸ್ಟರ್ ಮೋದಿ ಸಪೋರ್ಟ್ ಮಾಡ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಸಾಥ್ ಕೊಡೋದಾಗಿ ಅವರು 2022ರ ಮನ್ ಕಿ ಬಾತ್ ನಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು.
ರಾಮಾಯಣ – ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ ಚಿತ್ರದ ಶಕ್ತಿಯಾಗಿ ನಿಲ್ತಿದ್ದಾರೆ. ಇದನ್ನ ಗೀಕ್ ಪಿಕ್ಚರ್ಸ್ ಇಂಡಿಯಾ ಬ್ಯಾನರ್ ಭಾರತದಾದ್ಯಂತ ಇದೇ ಜನವರಿ 24ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ಮುಂದಾಗಿದೆ. ಇಂಗ್ಲಿಷ್ ಜೊತೆ ಹಿಂದಿ, ತೆಲುಗು ಹಾಗೂ ತಮಿಳು ಹೀಗೆ ನಾಲ್ಕು ಭಾಷೆಯಲ್ಲಿ ಚಿತ್ರ ಬರಲಿದ್ದು, ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಬರವಣಿಗೆ ಕೂಡ ಇದಕ್ಕೆ ಪುಷ್ಟಿ ನೀಡಲಿದೆ.
ಅಂದಹಾಗೆ ರಾಮಾಯಣ- ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ 90ರ ದಶಕದ ಜಾಪನೀಸ್ ಅನಿಮೇಟೆಡ್ ಮೂವಿ. 90ರ ದಶಕದಲ್ಲಿ ಇದು ವಿಶ್ವದಾದ್ಯಂತ ಮಾಡಿದ ಹಂಗಾಮ ಅಷ್ಟಿಷ್ಟಲ್ಲ. ಅನಿಮೇಟೆಡ್ ಮೂವಿ ಆದ್ರೂ ಸಹ ಎವರ್ ಗ್ರೀನ್ ಮಾಸ್ಟರ್ ಪೀಸ್ ಆಗಿ ಎಲ್ಲರ ಮನಸ್ಸು ಗೆದ್ದಿತ್ತು.
1993ರಲ್ಲಿ 24ನೇ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕೂಡ ಆಗಿತ್ತು. ಜಪಾನ್, ಭಾರತ ಸೇರಿದಂತೆ ಹತ್ತು, ಹಲವು ದೇಶಗಳಲ್ಲಿ ತೆರೆಕಂಡ ಈ ರಾಮಾಯಣ, ಇದೀಗ ಮಗದೊಮ್ಮೆ ಬದಲಾದ ತಂತ್ರಜ್ಞಾನದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಸೌಂಡ್ ಕ್ವಾಲಿಟಿ, ವಿಡಿಯೋ ಕೂಡ ಡಿಜಿಟಲ್ ರೂಪ ಪಡೆದು ಬರ್ತಿರೋದು ಇಂಟರೆಸ್ಟಿಂಗ್. ಈ ರಾಮಾಯಣ ಬಂದ್ರೆ ನಮ್ಮ ಯಶ್ ರಾಮಾಯಣಕ್ಕೆ ಹೊಡೆತ ಬೀಳಲಿದೆ ಅನ್ನೋದು ಹಲವರ ಅಭಿಪ್ರಾಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್