ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಎಮೋಷನಲ್ ಮನೆಯಾಗಿ ಬದಲಾಗಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆ ದೀಪಾವಳಿ ಆಫರ್ ಕೊಟ್ಟಿದ್ದಾರೆ.
ಬಿಗ್ಬಾಸ್ ಸೀಸನ್ 11 ಶುರುವಾಗಿ ಒಟ್ಟು 4 ವಾರಗಳು ಕಳೆಯುತ್ತಿವೆ. ಈ ನಾಲ್ಕು ವಾರದಲ್ಲಿ ಸ್ಪರ್ಧಿಗಳು ಮನೆಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ದೀಪಾವಳಿ ಹಬ್ಬದ ನಿಮಿತ್ತ ಸ್ಪರ್ಧಿಗಳೀಗೆ ಬಿಗ್ಬಾಸ್ ಕುಟುಂಬಸ್ಥರಿಂದ ಒಂದೊಂದಾಗಿ ಪತ್ರವನ್ನು ಕಳುಹಿಸಿ ಕೊಡುತ್ತಿದ್ದಾರೆ.
ಇದನ್ನು ಓದಿ: ಗೋಲ್ಡ್ ಸುರೇಶ್ಗೆ ವರ್ತೂರು ಸವಾಲು; ಕಾರಣವೇನು?
ತಮ್ಮ ತಮ್ಮ ಫ್ಯಾಮಿಲಿಯಿಂದ ಬಂದ ಪತ್ರವನ್ನು ಓದಲು ಎಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ. ಬಂದ ಪತ್ರವನ್ನು ಕಣ್ಣೀರು ಹಾಕಿತ್ತಾ ಓದಿದ್ದಾರೆ, ಆದರೆ ಫ್ಯಾಮಿಲಿಯ ಪತ್ರವನ್ನು ಎಲ್ಲರೂ ಓದುತ್ತಿದ್ದಾಗ.. ಫ್ಯಾಮಿಲಿನೇ ಇಲ್ಲದ ಐಶ್ವರ್ಯಗೆ ಬಿಗ್ಬಾಸ್ ಕಡೆಯಿಂದ ಒಂದು ಕರೆಯೋಲೆ ಬಂದಿದೆ. ಐಶ್ವರ್ಯಗೆ ಯಾವುದೇ ಪತ್ರ ಬಂದಿರಲಿಲ್ಲ. ಎಲ್ಲರು ತಮಗೆ ಬಂದ ಪತ್ರವನ್ನು ಓದುತ್ತಿದ್ದಾಗ ಅವರು ಕಣ್ಣೀರು ಹಾಕುತ್ತಿದ್ದರು. ನನಗೂ ಪತ್ರ ಬಂದೇ ಬರುತ್ತೆ ಅಂತ ಕಾಯುತ್ತಿದ್ದ ಐಶ್ವರ್ಯಗೆ ಬೇಸರ ಆಗಿದೆ.
ಇದನ್ನು ಓದಿ: ಆಂಧ್ರ ಕಾಂಗ್ರೆಸ್ ಅಧ್ಯಕ್ಷೆಗೆ ಭದ್ರತೆ ಹೆಚ್ಚಳಕ್ಕೆ ಮನವಿ..!
ಇದೇ ಬೇಸರದಲ್ಲಿ ಕಣ್ಣೀರು ಹಾಕುತ್ತಿದ್ದ ಐಶ್ವರ್ಯಗೆ ಬಿಗ್ಬಾಸ್ ಮಾತು ಕೇಳಿ ಖುಷಿಯಾಗಿದ್ದಾರೆ. ಪ್ರೀತಿಯ ಐಶ್ವರ್ಯ ನನ್ನದೊಂದು ಪತ್ರ, ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನೀರುವೆ ನಿಮ್ಮೊಂದಿಗೆ ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ಬಾಸ್.. ಇದೇ ಬಿಗ್ಬಾಸ್ ವಾಯ್ಸ್ ಕೇಳಿ ಐಶ್ವರ್ಯ ಫುಲ್ ಖುಷ್ ಆಗಿದ್ದಾರೆ.