ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಏಕಾಏಕಿ ಸಿಡಿದೆದ್ದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಲೇ ಇರುತ್ತಾರೆ. ಆದರೆ ಈ ಬಾರಿಯ ಬಿಗ್ಬಾಸ್ ಸೀಸನ್ 11ರಲ್ಲಿ ಎಲ್ಲ ಸ್ಪರ್ಧಿಗಳು ಫೈರ್ ಬ್ರ್ಯಾಂಡ್ ಆಗಿ ಆಡುತ್ತಿದ್ದಾರೆ. ಕೊಂಚವೂ ಸೈಲೆಂಟ್ ಆಗಿರದೇ ಮಾಡಿದ ತಪ್ಪಿಗೆ ಧ್ವನಿ ಎತ್ತುತ್ತಿದ್ದಾರೆ.
ಇದನ್ನು ಓದಿ: ಕೆ.ಎಲ್ ರಾಹುಲ್ ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ!
ನಿನ್ನೆ ನಡೆದ ಎಪಿಸೋಡ್ನಲ್ಲೂ ಗೌತಮಿ ಜಾಧವ್ ಅವರು ಧನರಾಜ್ ಆಚಾರ್ಯ ಮೇಲೆ ಕೋಪಗೊಂಡಿದ್ದಾರೆ. ಹೀಗೆ ಮುಂಜಾನೆ ಬಿಗ್ಬಾಸ್ ಮನೆಯಲ್ಲಿ ಸಾಂಗ್ ಹಾಕಲಾಗಿತ್ತು. ಸಾಂಗ್ ಪ್ಲೈ ಆಗುತ್ತಿದ್ದಂತೆ ಮನೆ ಮಂದಿ ಒಬ್ಬರಾಗಿ ಎದ್ದೇಳುತ್ತಿದ್ದರು. ಆದರೆ ಇನ್ನೂ ಗೌತಮಿ ಜಾಧವ್ ಎದ್ದಿರಲಿಲ್ಲ. ಹೀಗಾಗಿ ಧನರಾಜ್ ಅವರು ದಿಬ್ಬಿನಿಂದ ನಿಧಾನಕ್ಕೆ ಹೊಡೆದು ಎಬ್ಬಿಸಿದ್ದಾರೆ.
ಇದನ್ನು ಓದಿ: ದೀಪಾವಳಿ ‘ಗ್ಯಾರಂಟಿ’ ಭವಿಷ್ಯ.!
ಇದಕ್ಕೆ ಕೋಪಗೊಂಡ ಗೌತಮಿ, ನನಗೆ ಹಾಗೇ ಎಬ್ಬಿಸಬೇಡಿ. ಸಾಂಗ್ ಪ್ಲೈ ಆದ ಕೂಡಲೇ ನಾನೇ ಎದ್ದೇಳುತ್ತೇನೆ. ಇನ್ನೂ ಯಾವತ್ತು ಹೀಗೆ ಮಾಡಬೇಡಿ. ಮಾಡಿದರೇ ನಾನು ಸುಮ್ಮನೆ ಇರೋದಿಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಆಗ ಧನರಾಜ್ ಅವರು ನಾನು ಬೇಕು ಅಂತಾ ಹಾಗೇ ಮಾಡಲಿಲ್ಲ. ನೀವು ನನಗೆ ಬೈಯುವಾಗ ಪಾಸಿಟಿವ್ ಆಗಿ ಇರಲಿಲ್ಲ ಅಂತ ಹೇಳಿದ್ದಾರೆ. ಕೊನೆಗೆ ಇದೇ ವಿಚಾರಕ್ಕೆ ಧನರಾಜ್ ಗೌತಮಿಗೆ ನಾಮಿನೇಟ್ ಮಾಡಿದ್ದಾರೆ.