ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡಕಾರಿದ್ದಾರೆ ಈ ಸ್ಪರ್ಧಿ. ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್ ಸುರೇಶ್ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.
ಇದನ್ನು ಓದಿ: ಸ್ಟೈಲಿಶ್ ಲುಕ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಒಬೆನ್ ರೋರ್ ಇಝಡ್ ಬೈಕ್!
ಈ ವಾರ ನಾಮಿನೇಟ್ ಆಗಿರುವ 7 ಮಂದಿ ಪೈಕಿ ಗೋಲ್ಡ್ಸುರೇಶ್ ಕೂಡ ಇದ್ದಾರೆ. ಅದರ ಜೊತೆಗೆ ಅವರಿಗೆ ಕಳಪೆ ಪಟ್ಟವೂ ಸಿಕ್ಕಿದೆ. ಹಲವು ಕಾರಣಗಳನ್ನು ನೀಡಿ ಗೋಲ್ಡ್ ಸುರೇಶ್ ಅವರಿಗೆ ಕಳಪೆ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ತಮ್ಮ ಕಡೆಗೆ ಎಲ್ಲರೂ ಬೆರಳು ತೋರಿಸಿದ್ದು ನೋಡಿ ಗೋಲ್ಡ್ ಸುರೇಶ್ ಅವರಿಗೆ ಶಾಕ್ ಆಗಿದೆ.
ಇದನ್ನು ಓದಿ: ಕೇರಳದಲ್ಲೂ ವಕ್ಫ್ ಭೂ ವಿವಾದ: 614 ಕುಟುಂಬಗಳಿಗೆ ಸಂಕಷ್ಟ
ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್ಬಾಸ್ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.