ಬಿಗ್ ಬಾಸ್ ಸೀಸನ್ 11ರಲ್ಲಿ ಜಗದೀಶ್ ಅವರ ತುಂಟಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ವಾಸಿಗಳಿಗೆ ಟಾಸ್ಕ್ಗಳು ತಲೆ ನೋವಾಗುತ್ತಿದೆ. ಇದೀಗ ಸ್ವರ್ಗದಿಂದ ನರಕ್ಕೆ ಕ್ರಮೇಣವಾಗಿ ಅದಲು ಬದಲಾಗುವ ಸಮಯ ಬಂದಾಗಿದೆ.
ಕಲರ್ಸ್ ವಾಹಿನಿ ಹೊಸ ಪ್ರೋಮೋ ಶೇರ್ ಮಾಡಿಕೊಂಡಿದೆ. ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಆದರೆ ಹಂಸ ಅವರು ಸಾರಿ ಕೇಳಿದ್ದಾರೆ. ಬೇಕಿದ್ದರೆ ನನ್ನನ್ನು ನರಕಕ್ಕೆ ಕಳುಹಿಸಿ. ತಪ್ಪು ಮಾಡಿದ್ದು ನಾನು. ಸ್ವರ್ಗದವರನ್ನು ಶಿಕ್ಷಿಸಬೇಡಿ ಎಂದು ರಿಕ್ವಸ್ಟ್ ಮಾಡಿದ್ದಾರೆ. ಆದರೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಪ್ರೋಮೋ ನೋಡಿದರೆ ಐಶ್ವರ್ಯಾ ಅವರು ನರಕಕ್ಕೆ ಹೋಗುವಂತಿದೆ ಈ ರೀತಿ ಅನೌನ್ಸ್ ಆಗಿದ್ದಕ್ಕೆ ಲಾಯರ್ ಜಗದೀಶ್ ಅವರು ಫುಲ್ ಖುಷಿ ಆದರು. ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ ಐಶ್ವರ್ಯಾ ಮಾತ್ರ ಅನುಷಾ ಅವರನ್ನು ಅಪ್ಪಿಕೊಂಡು ಅತ್ತಿದ್ದಾರೆ.
ಇನ್ನೊಂದು ಪ್ರೋಮೋದಲ್ಲಿ ಕೂಡ ಸ್ವರ್ಗ ನಿವಾಸಿಯಾದ ಗೌತಮಿ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಹೀಗಾಗಿ ಅನುಷಾ ಎಂದರು. ಆದರೆ ಪರದೆ ಇದ್ದ ಸಮಯದಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದು ಮೋಕ್ಷಿತಾ ಅಂತ ಅನುಷಾ ಕೂಗಿದ್ದಾರೆ.
ಇನ್ನು ಜಗದೀಶ್ ಅವರು ಪ್ರತಿ ಸಂಚಿಕೆಯಲ್ಲೂ ಪ್ರಮುಖ ಹೈಲೈಟ್ ಆಗುತ್ತಿದ್ದಾರೆ. ಜಗದೀಶ್ ಅವರ ತುಂಟತನ ಇದೀಗ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಕಮೆಂಟ್ನಲ್ಲಿ ಜಗದೀಶ್ ಅವರನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ಇನ್ನೊಂದೆಡೆ ನೇರವಾಗಿ ಎಲ್ಲರನ್ನೂ ಬಿಗ್ ಬಾಸ್ ನಾಮಿನೇಟ್ ಮಾಡಿದ್ದರು ಇದೀಗ ಟಾಸ್ಕ್ ಮೂಲಕ ಎಲ್ಲರೂ ತಮ್ನನ್ನು ಪ್ರೂವ್ ಮಾಡಿಕೊಳ್ಳಬೇಕಿದೆ. ನಿನ್ನೆಯ ಸಂಚಿಕೆಯಲ್ಲಿ ಉಗ್ರಮಂ ಮಂಜು ಹಾಗೂ ಮೋಕ್ಷಿತಾ ಅವರು ನಾಮಿನೇಷನ್ನಿಂದ ಪಾರಾಗಿದ್ದಾರೆ. ಇದು ಯಾರೆಲ್ಲ ಬಚಾಬ್ ಆಗ್ತಾರೆ ಎಂದು ವೀಕ್ಷಕರು ಕುತೂಹಲದಿಂದ ಕಾದಿದ್ದಾರೆ.