ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ದು ಮಾಡುತ್ತಿರುವುದೇ ಗಲಾಟೆಗಳಿಂದ. ಮಾತುಕತೆ, ಟಾಸ್ಕ್ಗಳಿಗಿಂತ ಹೆಚ್ಚಾಗಿ ಗಲಾಟೆಗಳೆ ದೊಡ್ಮನೆಯಲ್ಲಿ ತುಂಬಿದೆ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವ ಹನುಮಂತ ಈ ಗಲಾಟೆಗಳ ಮಧ್ಯೆ ಸಿಲುಕಿ ನಲುಗಿ ಹೋಗಿದ್ದಾರೆ. ವೀಕ್ಷಕರು ಮಾತ್ರ ಈತ ಜಾಣ, ಪೆದ್ದನಂತೆ ವರ್ತಿಸ್ತಿದ್ದಾನೆ ಎನ್ನುತ್ತಿದ್ದಾರೆ. ಏನೆ ಆದರೂ ಬಿಗ್ ಮನೆಯಲ್ಲಿ ಹನುಮಂತ ಬಂದಮೇಲೆ ಎಂಟರ್ಟೇನ್ಮೆಂಟ್ಗೇನು ಕಡಿಮೆಯಿಲ್ಲ. ಕೆಲವೊಂದಿಷ್ಟು ಜನ ಇವನು ಯಾಕೆ ಹಿಂಗೆ? ಎಂದು ಅಂದುಕೊಳ್ಳತಿದ್ದರೇ, ಇನ್ನು ಕೆಲವರು ಪೆದ್ದ ಆದರೂ ಒಂದು ಮುಗ್ಧತೆ ಇದೆ ಎಂದು ಭಾವಿಸಿದ್ದಾರೆ. ಹನುಮಂತ ಅವರ ಈ ಮುಗ್ಧತೆ ಹಾಗೂ ಒಳ್ಳೆಯತನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.
ನಿನ್ನೆ ಹನುಮಂತಗೆ ಬಿಗ್ಬಾಸ್ನ ಕನ್ಫೆಷನ್ ರೂಮ್ಗೆ ಬರೋಕೆ ಹೇಳಿದರು. ಒಳಗೆ ಹೋದ ಅವರಿಗೆ ಬಿಗ್ ಬಾಸ್ ಐಸ್ಕ್ರೀಂ ಬಾಕ್ಸ್ನಲ್ಲಿ ಕೀ ಕೊಟ್ಟರು. ಅಲ್ಲದೆ ಒಂದು ಷರತ್ತನ್ನು ಹಾಕಿದರು. ‘ಮನೆಯವರ ಬಳಿ ಎಂಟರ್ಟೇನ್ಮೆಂಟ್ ಮಾಡುವಂತೆ ನೀವು ಕೇಳಬಹುದು. ಅದರಿಂದ ನಿಮಗೆ ಖುಷಿ ಆದರೆ ಮಾತ್ರ ಐಸ್ಕ್ರೀಂ ತೆಗೆದುಕೊಡಬಹುದು’ ಎಂದು ಬಿಗ್ ಬಾಸ್ ಹೇಳಿದರು. ಅದರಂತೆ ಹನುಮಂತ ಅವರು ಎಲ್ಲರ ಬಳಿಯೂ ಮನರಂಜನೆ ನೀಡುವಂತೆ ಕೋರಿದರು. ಕೆಲವರು ಹನುಮಂತ ಅವರ ಆಸೆಯನ್ನು ಈಡೇರಿಸಿದರೆ, ಇನ್ನೂ ಕೆಲವರು ಅವರ ಮಾತಿಗೆ ಬೆಲೆ ಕೊಡಲಿಲ್ಲ. ಇದೇ ಕಾರಣಕ್ಕೆ ಮನರಂಜನೆ ನೀಡದವರಿಗೆ ಐಸ್ಕ್ರೀಂ ಕೊಡಲ್ಲ ಎಂದು ಹೇಳುವ ಅವಕಾಶ ಹನುಮಂತಗೆ ಇತ್ತು. ಆದರೆ, ಹನುಮಂತ ಹಾಗೆ ಮಾಡಲೇ ಇಲ್ಲ.
ನನಗೆ ಮನರಂಜನೇ ಮಾಡಿದವರು ನಮ್ಮವರೇ, ಮಾಡದೇ ಇದ್ದವರೂ ನಮ್ಮವರೇ. ಬಿಗ್ ಬಾಸ್ ಮನೆಗೆ ಬಂದ ಖುಷಿಗೆ ಎಲ್ಲರಿಗೂ ಐಸ್ಕ್ರೀಂ ಕೊಡ್ತೀನಿ. ನೀವು ಬೈದರೂ ನಾನು ಬೈಸಿಕೊಳ್ಳುತ್ತೇನೆ’ ಬಿಗ್ಬಾಸ್ ಎಂದರು ಹನುಮಂತ. ಹನುಮಂತನ ಈ ಒಳ್ಳೆಯತನ, ಮುಗ್ಧತೆ ಮನೆಯಲ್ಲಿರುವವರಿಗೂ ಇಷ್ಟ . ಬಿಗ್ಬಾಸ್ ನೋಡೊ ವೀಕ್ಷಕರಿಗೂ ಇನ್ನು ಹತ್ತಿರವಾಗಿದ್ದಾನೆ. ಮೊದಲಿಗೆ ಹನುಮಂತ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗ ಇದನ್ನು ಕೆಲವರು ಟೀಕೆ ಮಾಡಿದ್ದರು. ಅವರು ಬಿಗ್ ಬಾಸ್ಗೆ ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಅವರು ದೊಡ್ಮನೆ ಸೇರಿದ ಕೆಲವೇ ದಿನಗಳಲ್ಲಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ.
ಇದಕ್ಕೆ ಹೇಳೋದು ‘ಉತ್ತರಕರ್ನಾಟಕ ಮಂದಿ ಮಾತು ಬಿರಸ್ ನನ್ನ ಒಮ್ಮೆ ನೆನಸ್’ ಎಂದು ಹನುಮಂತ ಬಿಗ್ ಬಾಸ್ ಮನೆಯಲ್ಲಿ ತೋರಿಸಿದ್ದಾನೆ. ದೊಡ್ಮನೆ ಮಂದಿ ಅಷ್ಟೇ ಅಲ್ಲದೇ ಎಲ್ಲರ ಮನಸ್ಸನ್ನ ಗೆದ್ದಿದ್ದಾನೆ.