ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ”ಬಿಗ್ ಬಾಸ್ ಸೀಸನ್ 11”ರ ಆರನೇ ವಾರದ ಆಟ ಸಾಗಿದೆ. ಎಂದಿನಂತೆ ಸ್ಪರ್ಧಿಗಳಿಗೆ ಟಾಸ್ಕ್ ಕೊಡಲಾಗಿದೆ. ಆದ್ರೆ ಮುಗ್ಧನಾಗಿ ಗುರುತಿಸಿಕೊಂಡಿರುವ ಹನುಮಂತು ಅವರಿಗೆ ಈ ಟಾಸ್ಕ್ನ ತೀರ್ಪು ಮುಳುವಾಗುವಂತೆ ತೋರಿದೆ. ಹನುಮಂತು ವಿರುದ್ಧ ಚೈತ್ರಾ ಕುಂದಾಪುರ ಹಾಗೂ ಗೌತಮಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಿಯತ್ತಿನ ಆಟ ಆಡಿದ್ದಕ್ಕೆ ಈ ಸೀಸನ್ನಲ್ಲಿ ಕಿಚ್ಚನ ಚಪ್ಪಾಳೆಯನ್ನು ಹನುಮಂತು ಅವರು ಸ್ವೀಕರಿಸಿದ್ದರು. ಇದೀಗ ಅವರ ನಿಯತ್ತಿಗೇನೆ ಸಹ ಸ್ಪರ್ಧಿಗಳಿಂದ ಪ್ರಶ್ನೆ ಎದುರಾಗಿದೆ.
ಇದನ್ನು ಓದಿ:ಲೇಡಿಸ್ ಟಾಯ್ಲೆಟ್ನಲ್ಲಿ ಕ್ಯಾಮೆರಾ ಇಟ್ಟ ಕಾಮುಕ..!
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ನೀಡಲಾದ ಚಟುವಟಿಕೆಯಲ್ಲಿ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ನಡೆದಿದ್ಯಾ? ಈ ಪ್ರಶ್ನೆಗೆ ಸದ್ಯಕ್ಕೆ ಖಚಿತ ಉತ್ತರ ಇಲ್ಲ. ಆದರೆ, ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ.. ಹಸಿರು ಬಣ್ಣ ತಂಡದ ಉಗ್ರಂ ಮಂಜು ಹಾಗೂ ಹಳದಿ ಬಣ್ಣದ ತಂಡದ ಶಿಶಿರ್ ಮಧ್ಯೆ ಮಾತಾಗಿರುವುದು, ಒಪ್ಪಂದ ಆಗಿರುವುದು ಸತ್ಯ. ಇದರಿಂದಲೇ ಗೌತಮಿ ಜಾಧವ್ ಹಾಗೂ ಚೈತ್ರಾ ಕುಂದಾಪುರ ರೊಚ್ಚಿಗೆದ್ದಿರುವ ಸಾಧ್ಯತೆ ಹೆಚ್ಚಿದೆ.! ಹನುಮಂತನ ವಿರುದ್ಧ ಸಿಡಿದೆದ್ದ ಚೈತ್ರಾ ಕುಂದಾಪುರ ನಿಯತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ:ಪವನ್ v/s ನಾಯ್ಡು.! ಆಂಧ್ರದಲ್ಲಿ ಅಲ್ಲೋಲ.. ಕಲ್ಲೋಲ.!
ಹಾಗಾದ್ರೆ, ಹನುಮಂತ ಲಮಾಣಿ ನಿಯತ್ತಿನಿಂದ, ಪ್ರಾಮಾಣಿಕವಾಗಿ ನಿರ್ಧಾರ ಮಾಡಿಲ್ವಾ? ಕ್ಯಾಪ್ಟನ್ ಹನುಮಂತ ಪಕ್ಷಪಾತದ ನಿರ್ಧಾರ ಕೈಗೊಂಡಿದ್ದಾರಾ? ಇವೆಲ್ಲದಕ್ಕೂ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ. ಕಳೆದ ವಾರ ಪ್ಲಾನ್ನಿಂಗ್, ಪ್ಲಾಟಿಂಗ್, ಸ್ಟ್ರಾಟೆಜಿ.. ಎಲ್ಲರ ತಲೆಯಲ್ಲೂ ಓಡುತ್ತಿದ್ದಾಗ.. ಪ್ರಾಮಾಣಿಕತೆ ಹಾಗೂ ನಿಯತ್ತಿನಿಂದ ಆಟವಾಡಿ ಕ್ಯಾಪ್ಟನ್ ಪಟ್ಟಕ್ಕೆ ಏರಿದ್ದು, ಇದೇ ಹನುಮಂತ ಲಮಾಣಿ! ಈಗ ಹನುಮಂತನ ಮೇಲೆಯೇ ನಿಯತ್ತಿನ ಪ್ರಶ್ನೆ ಬಂದಿದೆ. ಅದನ್ನ ಹನುಮಂತ ಹೇಗೆ ಹ್ಯಾಂಡಲ್ ಮಾಡ್ತಾರೋ.. ಎಂದು ಕಾದುನೋದಬೇಕಿದೆ.