ಬೆಂಗಳೂರು: ಈ ವಾರದ ಬಿಗ್ ಬಾಸ್ ಮನೆ ರಣಾಂಗಣವಾಗಿದೆ. ಮನೆಯ ಎಲ್ಲರೂ ಸೇರಿ ಜಗದೀಶ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದರಿಂದ ಸಿಟ್ಟಾಗಿದ್ದ ಜಗದೀಶ್ ಮನೆಮಂದಿಗೆಲ್ಲಾ, ಕೊನೆಗೆ ಬಿಗ್ಬಾಸ್ಗೂ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಮನೆಯಲ್ಲಿದ್ದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಬಿಗ್ ಬಾಸ್ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಇನ್ನು ಜಗದೀಶ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಕಾರಣಕ್ಕೆ ಕಿರುತೆರೆ ನಟ ರಂಜಿತ್ ಅವರನ್ನು ಮನೆಯಿಂದ ಹೊರದಬ್ಬಲಾಗಿದೆ. ಇವರಿಬ್ಬರೂ ಮನೆಯಿಂದ ಹೊರಹೋಗಿದ್ದು ಹೌದೋ? ಅಲ್ಲವೋ? ಎನ್ನುವ ಪ್ರಶ್ನೆಗಳ ನಡುವೆ ಶನಿವಾರದ ಕಿಚ್ಚನ ಪಂಚಾಯ್ತಿ ವೇದಿಕೆ ಸಿದ್ದವಾಗಿದೆ. ಇದರಲ್ಲಿ ಸ್ವತಃ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ಅನ್ನೇ ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಜಗದೀಶ್ ಅವರಿಗೆ ತಮ್ಮ ಮಾತಿನ ಮೂಲಕವೇ ಕೆಣಕಿದ ಮನೆಮಂದಿಗೆ ದೊಡ್ಡ ಮಟ್ಟದಲ್ಲಿ ಪ್ರಶ್ನೆ ಮಾಡಿದ್ದಾರೆ.
ತಪ್ಪು ಮಾಡಿದವರು ಹೊರಗಡೆ ಹೋಗಿದ್ದಾರೆ. ಆದರೆ, ನಿಮ್ಮ ಪೈಕಿ ಎಷ್ಟು ಜನರು ಸರಿ ಇದ್ದೀರಿ ಎಂದೇ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ಚಪ್ಪಲಿಯನ್ನು (ಉಗ್ರಂ ಮಂಜು) ಎತ್ತಿ ಬಿಸಾಡುತ್ತಾನೆ. ಅದು ನಿಮಗೆ ಒಕೆನಾ? ಎಂದು ಸುದೀಪ್ ಕೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಂದು ಹಂಸಾ ಮಾತು ಆರಂಭಿಸಿದ ವೇಳೆ,’ಪ್ರಾಮಾಣಿಕತೆ ಅನ್ನೋ ಶಬ್ದವೇ ಈ ಮನೆಗೆ ಎಂದೂ ಸೂಟ್ ಆಗೋದಿಲ್ಲ’ಎಂದು ಕಿಡಿಕಿಡಿಯಾಗಿದ್ದಾರೆ.
ಇದನ್ನೂ ಓದಿ: ಹಾಸಿಗೆ ಹಂಚಿಕೊಂಡರೆ ನಾಯಕಿಯರಿಗೆ ಹೆಚ್ಚು ಸಂಭಾವನೆ ಸಿಗುತ್ತಾ?