ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ರಾಜಿಯಾಗಿ ನೆಗೆಟಿವ್ ರೋಲ್ನಲ್ಲಿ ಖಡಕ್ ಆಗಿ ಮಿಂಚಿದ್ದ ಹಿರಿಯ ನಟಿ ಹಂಸಾ ನಾರಾಯಣಸ್ವಾಮಿ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಈಗಾಗಲೇ ಜಾರಿಯಲ್ಲಿರುವ ತಮ್ಮ ಪಾತ್ರಕ್ಕೆ ವಿದಾಯ ಹೇಳಿ ಅವರು ಬಿಗ್ ಬಾಸ್ ವೇದಿಕೆ ಏರಿದ್ದರು. ಅವರೊಂದಿಗೆ ಬಿಗ್ ಬಾಸ್ ವೇದಿಕೆಯಲ್ಲಿದ್ದ ಮಾನಸಾ ಸಂತೋಷ್ ನರಕಕ್ಕೆ ಪ್ರವೇಶ ಪಡೆದರೆ, ಹಂಸಾ ನಾರಾಯಣಸ್ವಾಮಿ ಸ್ವರ್ಗಕ್ಕೆ ಎಂಟ್ರಿ ಪಡೆದುಕೊಂಡರು. ಹಂಸಾ ನಾರಾಯಣಸ್ವಾಮಿ ಹಲವು ವರ್ಷಗಳಿಂದ ಕನ್ನಡ ಸೀರಿಯಲ್ಗಳು ಹಾಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಕನ್ನಡ ಕಿರುತರೆಗೆ ಅವರು ಚಿರಪರಿಚಿತರು. ಆದರೆ, ಬಿಗ್ ಬಾಸ್ನ ರಿಯಲ್ ಲೈಫ್ನಲ್ಲಿ ಅವರು ಹೇಗಿರುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿಯೂ ಇದೆ.
ಸೀರಿಯಲ್ಗಳಲ್ಲಿ ನೆಗೆಟಿವ್ ಶೇಡ್ ಮಾತ್ರಗಳಲ್ಲೇ ಮಿಂಚುತ್ತಿದ್ದ ಹಂಸಾ ನಾರಾಯಣಸ್ವಾಮಿ ಬಿಗ್ ಬಾಸ್ ಮನೆಯಲ್ಲಿ ಪಾಸಿಟವ್ ಅಥವಾ ನೆಗೆಟವಿವ್ ಯಾವ ರೋಲ್ ನಿಭಾಯಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಇನ್ನು ವೇದಿಕೆಯಲ್ಲಿಯೇ ಮಾನಸಾ ಸಂತೋಷ್ ಅವರ ಬಳಿಕ ಹಂಸ ಅವರ ಬಗ್ಗೆ ಅಭಿಪ್ರಾಯ ಕೇಳಲಾಯಿತು. ಇವರು ಹೆಚ್ಚು ದಿನ ಪೈಪೋಟಿ ನೀಡಲ್ಲ. ಟಫ್ ಸ್ಪರ್ಧಿ ಅಂತ ಅನಿಸುತ್ತಿಲ್ಲ. ಕೆಲವೇ ವಾರಗಳಲ್ಲಿ ಹೊರಗೆ ಬರುತ್ತಾರೆ ಎಂದು ಹೇಳಿದಾಗ ಹಂಸ ಮುಖ ಪೆಚ್ಚಾಗಿತ್ತು, ಇನ್ನು ಮಾನಸಾ ಅವರ ಬಗ್ಗೆ ಹಂಸ ಕೂಡ ಇದೇ ಅಭಿಪ್ರಾಯ ಹೇಳಿದರು. ಮಾನಸಾ ಮನರಂಜನೆ ಏನೂ ನೀಡ್ತಾರೆ. ಆದರೆ, ಹೆಚ್ಚು ದಿನ ಶೋನಲ್ಲಿ ಇರೋ ಹಾಗೆ ಕಾಣ್ತಿಲ್ಲ ಎಂದರು.
ಇನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಸಾ ನಾರಾಯಣಸ್ವಾಮಿ ಬಿಗ್ ಬಾಸ್ ವೇದಿಕೆಗೆ ಏರಿದ್ದರ ಬಗ್ಗೆ ಸಾಕಷ್ಟು ಕಾಮೆಂಟ್ಗಳು ಬಂದವು. ‘ಇವರು ಹೋಗಿದ್ದರಿಂದ ಇನ್ನು ಮೇಲೆ ಪುಟ್ಟಕ್ಕನಿಗೆ ಕಾಟ ತಪ್ಪಿತು’ , ಪುಟ್ಟಕ್ಕನಿಗೆ ಕಾಟ ಕೊಡೋಕೆ ರಾಜಿ ಈಗ ಇಲ್ಲ. ಇನ್ನು ನಮ್ಮ ಡೈರೆಕ್ಟರ್ ಯಾರನ್ನ ಕರೆದುಕೊಂಡು ಬರ್ತಾರೆ ಅಂತಾ ನೋಡ್ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇವರು ಆಡೋದನ್ನ ನೋಡಿದ್ರೆ, ಮೊದಲ ವೀಕ್ ಇವರೇ ಎಲಿಮಿನೇಷನ್ ಆಗೋ ರೀತಿ ಕಾಣ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇವರನ್ನ ನೋಡಿದ್ರೆ ಕಳೆದ ಸೀಸನ್ನಲ್ಲಿದ್ದ ತನೀಷಾ ಕುಪ್ಪಂಡ ರೀತಿ ಕಾಣ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ‘20 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಯಾವುತ್ತೂ ಸೆಲೆಬ್ರಿಟಿ ಫೀಲ್ ಬಂದಿರಲಿಲ್ಲ. ಆದರೆ ಬಿಗ್ ಬಾಸ್ಗೆ ಸೆಲೆಕ್ಟ್ ಆದ ದಿನದಿಂದ ಆ ರೀತಿ ಫೀಲ್ ಆಗುತ್ತಿದೆ. ನೆಗೆಟಿವ್ ಪಾತ್ರ ಹೆಚ್ಚಾಗಿ ಮಾಡಿದ್ದೇನೆ. ಆದರೆ ರಿಯಲ್ ಲೈಫ್ನಲ್ಲಿ ಆ ರೀತಿ ಹಿಂದಿನಿಂದ ಕುತಂತ್ರ ಮಾಡಲ್ಲ. ನೇರರಾದ ಬೋಲ್ಡ್ ವ್ಯಕ್ತಿತ್ವ ನನ್ನದು’ ಎಂದು ಹಂಸಾ ಹೇಳಿಕೊಂಡಿದ್ದಾರೆ.