ಮೋಕ್ಷಿತಾ ಪೈ ಅವರಿಗೆ ಈಗಿನ್ನೂ 29 ವರ್ಷ. ಅವರು ಮಂಗಳೂರಿನವರು. 1995ರ ಅಕ್ಟೋಬರ್ 22ರಂದು ಅವರು ಜನಿಸಿದರು. ಅವರು ನಾಗೇಶ್ ಪೈ ಹಾಗೂ ಗೋದಾವರಿ ದಂಪತಿಗೆ ಜನಿಸಿದರು. ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ಸಹೋದರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನ್ನೋದು ದುಃಖದ ವಿಚಾರ.
ಮೋಕ್ಷಿತಾ ಪೈ ಸಹೋದರನಿಗೆ ನರದ ತೊಂದರೆ ಇದೆ. ಇದರಿಂದ ಅವರ ಬೆಳವಣಿಗೆ ಕುಂಟಿತ ಆಗಿದೆ. ಅವರು ಸಹೋದರನ ಆರೈಕೆ ಮಾಡುತ್ತಾರೆ. ಈಗ ಸಹೋದರನ ಬಿಟ್ಟು ಅವರು ದೊಡ್ಮನೆಗೆ ಹೋಗುತ್ತಿದ್ದಾರೆ. ಇದು ಅವರ ಮುಂದಿರೋ ದೊಡ್ಡ ಸವಾಲುಗಳಲ್ಲಿ ಒಂದು.
ಮೋಕ್ಷಿತಾ ಪೈ ಅವರು ಜನಪ್ರಿಯತೆ ಪಡೆದಿದ್ದು ‘ಪಾರು’ ಧಾರಾವಾಹಿ ಮೂಲಕ. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. 2018ರಿಂದ ಈ ವರ್ಷ ಮಾರ್ಚ್ವರೆಗೆ ಧಾರಾವಾಹಿ ಪ್ರಸಾರ ಕಂಡಿದೆ. ಬರೋಬ್ಬರಿ 1393 ಎಪಿಸೋಡ್ಗಳನ್ನು ಇದು ಹೊಂದಿದೆ. ಅವರು ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
ಮೋಕ್ಷಿತಾ ಪೈ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 6.96 ಲಕ್ಷ ಹಿಂಬಾಲಕರು ಇದ್ದಾರೆ. ಈಗ ಬಿಗ್ ಬಾಸ್ಗೆ ಬಂದ ಬಳಿಕ ಅವರ ಜನಪ್ರಿಯತೆ ಹೆಚ್ಚಲಿದೆ. ಬಿಗ್ ಬಾಸ್ ಪೂರ್ಣಗೊಳ್ಳುವವರೆಗೆ ಒಂದು ಮಿಲಿಯನ್ ಹಿಂಬಾಲಕರು ಆದರೂ ಅಚ್ಚರಿ ಏನಿಲ್ಲ. ಅವರು ಬಿಗ್ ಬಾಸ್ ಎಂಟ್ರಿಗೂ ಮೊದಲು ಬಾಲಿ ಟ್ರಿಪ್ ಮಾಡಿ ಬಂದಿದ್ದಾರೆ.