ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪವಿತ್ರಾ ಗೌಡ 6 ತಿಂಗಳ ಬಳಿಕ ಮತ್ತೆ ಮನೆಗೆ ಮರಳಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಪವಿತ್ರಾ ಗೌಡ ರಿಲೀಸ್ ಆಗಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗ ಜೈಲಿನಲ್ಲಿ ಲಕ್ಷ್ಮಣ್ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಕೋರ್ಟ್ ನಿಂದ ಆದೇಶ ಬಂದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 10.30 ಕ್ಕೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಇ ಮೇಲ್ ಮೂಲಕ ಆದೇಶ ಪ್ರತಿ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾಥಿತ್ಯದ ಹಿನ್ನಲೆ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ಆದೇಶ ಪ್ರತಿ ತಡವಾಗಿ ಬಂದ ಹಿನ್ನಲೆ ಇಂದು ರಿಲೀಸ್ ಆಗಿದ್ದಾರೆ ಎನ್ನಲಾಗಿದೆ.
ಆರೋಪಿ ಲಕ್ಷ್ಮಣ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು, ಆದರೆ ಜಾಮೀನು ದೊರೆತಿರುವ ಅನುಕುಮಾರ್ ಮತ್ತು ಜಗದೀಶ್ ಅವರಿಗೆ ಶೂರಿಟಿ ಒದಗಿಸುವುದು ಕಷ್ಟವಾಗಿದ್ದು ಇನ್ನೂ ಜೈಲಿನಲ್ಲೇ ಇದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ದೊರೆತಿದೆ. ಅದೇ ದಿನ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ದೊರೆಯಿತು. ಜಾಮೀನು ದೊರೆತವರಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಹೊರಬಂದಿದ್ದಾರೆ. ಸ್ಟೋನಿ ಬ್ರೂಕ್ ಮಾಲೀಕ ಪ್ರದೋಶ್, ದರ್ಶನ್ ಆಪ್ತರಾದ ನಾಗರಾಜು ಮತ್ತು ಲಕ್ಷ್ಮಣ್ ಅವರಿಗೆ ಜಾಮೀನಿಗೆ ನೀಡಬೇಕಾದ ಬಾಂಡ್ ಹಾಗೂ ಇತರೆ ಶೂರಿಟಿಗಳನ್ನು ಒದಗಿಸುವುದು ಸಮಸ್ಯೆ ಆಗಿಲ್ಲ. ಆದರೆ ಜಗದೀಶ್ ಮತ್ತು ಅನುಕುಮಾರ್ ಅವರಿಗೆ ಜಾಮೀನಿಗೆ ಶೂರಿಟಿ ಒದಗಿಸುವುದು ಸಮಸ್ಯೆ ಆಗಿದೆ.
ಜಗದೀಶ್ ಮತ್ತು ಅನುಕುಮಾರ್ ಇಬ್ಬರೂ ಚಿತ್ರದುರ್ಗದವರಾಗಿದ್ದು ಬಡ ಕುಟುಂಬದವರು. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಲು ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಜಗ್ಗು ಬಳಸಿಕೊಂಡಿದ್ದ. ಅನುಕುಮಾರ್ ಹಾಗೂ ಜಗದೀಶ್ ಇಬ್ಬರ ಕುಟುಂಬದವರು ಸ್ಥಿತಿವಂತರಲ್ಲ. ಈಗ ಈ ಇಬ್ಬರಿಗೂ ಜಾಮೀನು ದೊರೆತಿದೆ ಆದರೆ ಬಿಡುಗಡೆ ಗೊಳ್ಳಲು ನೀಡಬೇಕಾಗಿರುವ ಶೂರಿಟಿ, ಬಾಂಡ್ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.