ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದಷ್ಟು ಇಷ್ಟದ ಜಾಗವನ್ನ ಸುತ್ತುತ್ತಿದ್ದಾರೆ. ಅಮೆರಿಕಾದಿಂದ ಬಂದ್ಮೇಲೆ ಒಂದಷ್ಟು ಚಾನೆಲ್ಗಳಿಗೂ ಮಾತನಾಡಿದ್ದಾರೆ. ಯುಟ್ಯೂಬ್ ಚಾನೆಲ್ ಜೊತೆಗೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇದೆಲ್ಲ ಆದ್ಮೇಲೆ ಇದೀಗ ಶಿರಸಿ ಕಡೆಗೂ ಬಂದಿದ್ದಾರೆ. ಸಾಮಾನ್ಯವಾಗಿ ಶಿವಣ್ಣ ಈ ಕಡೆಗೆ ಬರೋದು ತುಂಬಾನೆ ಕಡಿಮೆನೇ ಬಿಡಿ. ಆದರೆ, ಡೈರೆಕ್ಟರ್ ಸುನಿಲ್ ಕುಮಾರ್ ದೇಸಾಯಿ ಅವರ ಸಿನಿಮಾಗೋಸ್ಕರವೆ ಶಿವಣ್ಣ ಈ ಭಾಗಕ್ಕೆ ಬಂದಿದ್ದರು.
ಅವರೇ ಹೇಳುವಂತೆ ನಮ್ಮೂರ ಮಂದಾರ ಹೂವೇ ಚಿತ್ರದ ಶೂಟಿಂಗ್ ಟೈಮ್ ಅಲ್ಲಿಯೇ ಶಿರಸಿಗೆ ಶಿವಣ್ಣ ಬಂದಿದ್ದರು. ಇಲ್ಲಿಯ ಸುಂದರವಾದ ಯಾಣಕ್ಕೂ ಹೋಗಿದ್ದರು. ಸಿನಿಮಾದ ಪ್ರಮುಖ ದೃಶ್ಯದ ಶೂಟಿಂಗ್ ಅಲ್ಲೂ ಭಾಗಿ ಆಗಿದ್ದರು. ಇದೀಗ ಮತ್ತೆ ಇಲ್ಲಿಗೆ ಬಂದಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಕೂಡ ಯಾಣಗೆ ಭೇಟಿ ಕೊಟ್ಟಿದ್ದಾರೆ.
ಆ ದಿನಗಳನ್ನು ಶಿವರಾಜ್ಕುಮಾರ್ ಅವರು ನೆನಪು ಮಾಡಿಕೊಂಡಿದ್ದಾರೆ. ‘ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ’ ಎಂದು ಶಿವಣ್ಣ ಈ ಫೋಟೋ ಹಂಚಿಕೊಂಡಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿವಣ್ಣ, ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ ಎಂಬ ಸಾಲು ಬರೆದುಕೊಂಡಿದ್ದಾರೆ.
ಹಾಗೆ ಈ ಒಂದು ಮಾತಿನ ಜೊತೆಗೆ ಎರಡು ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಶಿವಣ್ಣ ದಿಬ್ಬದ ಮೇಲೆ ನಿಂತಿದ್ದಾರೆ. ಹಿಂದೆ ಯಾಣದ ಬೆಟ್ಟ ಇದೆ. ಆದರೆ, ಮತ್ತೊಂದು ಫೋಟೋದಲ್ಲಿ ನಮ್ಮೂರ ಮಂದಾರ ಹೂವೇ ಚಿತ್ರದ ಇಡೀ ಟೀಮ್ ಇದೆ ಅಂತಲೇ ಹೇಳಬಹುದು.
ಶಿವರಾಜ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ನಮ್ಮೂರ ಮಂದಾರ ಹೂವೇ ಚಿತ್ರದ ಒಂದು ಹಳೆ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಇದು ತುಂಬಾನೆ ವಿಶೇಷವಾಗಿಯೇ ಇದೆ. ಈ ಒಂದು ಫೋಟೋದಲ್ಲಿ ನಟಿ ಪ್ರೇಮಾ ಇದ್ದಾರೆ. ಜೊತೆಗೆ ನಟಿಸಿರೋ ರಮೇಶ್ ಅರವಿಂದ್ ಇದ್ದಾರೆ. ಸಿನಿಮಾದ ಇತರ ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc