ಪುಷ್ಪ ಚಿತ್ರ ಈಗಾಗ್ಲೇ ಸಾವಿರಾರು ಕೋಟಿ ಬಿಸಿನೆಸ್ ಮಾಡಿದೆ. ಈ ಸಿನಿಮಾದಲ್ಲಿ ತೋರಿಸಿರೋದು ರಕ್ತ ಚಂದನ ಸ್ಮಗ್ಲಿಂಗ್ ಮಾಡೋ ಒಬ್ಬ ಸ್ಮಗ್ಲರ್ ಕಥೆ. ರಕ್ತ ಚಂದನ ಅರ್ಥಾತ್ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಿ, ಕೋಟ್ಯಧಿಪತಿಯಾಗೋ ನಾಯಕ, ಸರ್ಕಾರವನ್ನೇ ಚೇಂಜ್ ಮಾಡೋವಷ್ಟು ಪವರ್ ಫುಲ್ ಆಗ್ತಾನೆ. ಅಷ್ಟಕ್ಕೂ ಈ ರಕ್ತ ಚಂದನ ಅನ್ನೋದು ನಿಜಕ್ಕೂ ಇದ್ಯಾ..? ಈ ರಕ್ತಚಂದನ ತಿರುಪತಿ ಕಾಡುಗಳಲ್ಲಿ ಮಾತ್ರಾನೇ ಸಿಗುತ್ತಾ..? ಇದಕ್ಕೆ ಅಷ್ಟೆಲ್ಲ ಕೋಟಿ ಕೋಟಿ ಡಿಮ್ಯಾಂಡ್ ಇದ್ಯಾ..? ಅದರ ರಿಯಲ್ ಸ್ಟೋರಿ ನೋಡೋಣ.
ರಕ್ತಚಂದನ ರಹಸ್ಯ..!
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಿಗುವ ಮರವೇ ಈ ರಕ್ತಚಂದನ. 2002ರವರೆಗೆ ಈ ಮರವನ್ನ ಬೆಳೆಯುವುದಕ್ಕೆ ನಿಷೇಧ ಇತ್ತು. ಈಗ ಯಾರು ಬೇಕಾದರೂ ಬೆಳೆಯಬಹುದು. ಆದರೆ ಇರುವ ಷರತ್ತು ಒಂದೇ, ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಹಾಗೂ ಮರ ಕಡಿಯುವ ಮೊದಲು ಪರ್ಮಿಷನ್ ತೆಗೆದುಕೊಳ್ಳಬೇಕು.
ರಕ್ತಚಂದನ ಡಿಮ್ಯಾಂಡ್..!
ರಕ್ತಚಂದನ ಮರ ಕೆಜಿಗೆ ಕನಿಷ್ಠ 20 ಸಾವಿರ ರುಪಾಯಿ ಇದೆ. ಒಳ್ಳೆ ಗುಣಮಟ್ಟದ ಮರ ಕೆಜಿಗೆ ಲಕ್ಷ ರುಪಾಯಿ ಕೂಡಾ ಇದೆ. ಅದರಲ್ಲೂ 30 ವರ್ಷದ ಮರಕ್ಕೆ ಡಿಮ್ಯಾಂಡ್ ಜಾಸ್ತಿ ಇದೆ. ಅತ್ಯುತ್ತಮ ದರ್ಜೆಯ ಮರಕ್ಕೆ ಕೆಜಿಗೆ 2 ಲಕ್ಷ ರುಪಾಯಿ ವರೆಗೂ ಮಾರ್ಕೆಟ್ ಇದೆ.
ರಕ್ತಚಂದನಕ್ಕೆ ಬೇಡಿಕೆ ಏಕೆ..?
ರಕ್ತಚಂದನಕ್ಕೆ ಅತೀವ ಬೇಡಿಕೆ ಇದೆ. ಸುಗಂಧ ದ್ರವ್ಯ, ಸೌಂದರ್ಯ ವರ್ಧಕಗಳಲ್ಲಿ ಈ ರಕ್ತ ಚಂದನವನ್ನ ಬಳಕೆ ಮಾಡ್ತಾರೆ. ಚರ್ಮದ ಹೊಳಪು ಹೆಚ್ಚಿಸುವ ಕ್ರೀಂಳಲ್ಲಿಯೂ ಸಹ ಈ ಮರದ ಬಳಕೆ ಹೆಚ್ಚು. ರಕ್ತಚಂದನದ ಶುದ್ಧ ಎಣ್ಣೆ ಕೆಜಿಗೆ ಒಂದೂವರೆ ಲಕ್ಷ ರುಪಾಯಿ ಇದೆ. ಕ್ಯಾನ್ಸರ್, ಅಲ್ಸರ್ ಕಾಯಿಲೆಯ ಔಷಧಿಗಳಿಗೆ ರಕ್ತಚಂದನ ಬಳಕೆಯಾಗುತ್ತದೆ. ಅಲಂಕಾರಿಕ ಪೀಠೋಕರಣ ಹಾಗೂ ಸಂಗೀತ ಉಪರಣಗಳಲ್ಲೂ ರಕ್ತ ಚಂದನ ಬಳಕೆ ಜಾಸ್ತಿ ಇದೆ.
ರಕ್ತಚಂದನ ಬೆಳೆಸುವುದು ಹೇಗೆ..?
ರಕ್ತಚಂದನ ಮರ ಬೆಲೆಯುವುದಕ್ಕೆ ಕೆಲವು ವಾತಾವರಣದ ಅಗತ್ಯ ಇದೆ. ಬೆಣಚುಕಲ್ಲು, ಕಲ್ಲು ಮಿಶ್ರಿತ ಮಣ್ಣಿನ ಪ್ರದೇಶದಲ್ಲಿ ರಕ್ತಚಂದನ ಚೆನ್ನಾಗಿ ಬೆಳೆಯುತ್ತದೆ. ಶುಷ್ಕ ವಾತಾವರಣ ಉತ್ತಮ, ಆದರೇ ಹಿಮ ಬಿದ್ದರೆ ಮರ ಬೆಳೆಯುವುದಿಲ್ಲ. ಗಿಡ ನೆಡುವುದಕ್ಕೆ ಸೂಕ್ತ ಸಮಯ ಮೇ-ಜೂನ್ ತಿಂಗಳು. ಆವಾಗ ನಾಟಿ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ. 3 ವರ್ಷಕ್ಕೆ 6 ಮೀಟರ್ ಎತ್ತರ ಬೆಳೆಯುತ್ತದೆ. ಇನ್ನೂ ಹೆಚ್ಚಾಗಿ ಬೆಳೆಯುವ ಪ್ರದೇಶಗಳನ್ನ ನೋಡೋದಾದ್ರೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಾಗಿ ಬೇಳೆಯುತ್ತಾರೆ. ಉತ್ತಮ ರಕ್ತಚಂದನ ಸಂಪೂರ್ಣ ಕೆಂಪಾಗಿರುತ್ತದೆ. ತೊಗಟೆ ಮಾತ್ರ ಕೆಂಪಗಿದ್ದು, ಒಳಗೆ ಬಿಳಿ ಇದ್ದರೆ ಗುಣಮಟ್ಟ ಇಲ್ಲ ಎಂದರ್ಥ.
ರಕ್ತಚಂದನಕ್ಕೆ ಎಲ್ಲೆಲ್ಲಿ ಡಿಮ್ಯಾಂಡ್..?
ರಕ್ತಚಂದನಕ್ಕೆ ದೇಶ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಭಾರತ ಮಾತ್ರವಲ್ಲದೇ ಜಪಾನ್, ಚೀನಾಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇದರ ಜೊತೆ ಯೂರೋಪ್ ರಾಷ್ಟ್ರಗಳಲ್ಲಿ ಭಾರೀ ಡಿಮ್ಯಾಂಡ್ ಇದೆ.
ಭಾರತವನ್ನ ಬಿಟ್ರೆ ಇಂತಹ ರಕ್ತ ಚಂದನ ಟಿಬೆಟ್, ಭೂತಾನ್ ಪ್ರದೇಶಗಳಲ್ಲಿ ಹೆಚ್ಚು ಸಿಗುತ್ತೆ. ಆದರೆ ಅಲ್ಲಿ ಹಿಮದ ಕಾಟ ಜಾಸ್ತಿ. ಹೀಗಾಗಿ ರಕ್ತಚಂದನ ಕ್ವಾಲಿಟಿ ಸಿಕ್ಕಲ್ಲ. ಕ್ವಾಲಿಟಿ ರಕ್ತ ಚಂದನ ಸಿಕ್ಕೋದು ಪುಷ್ಪದಲ್ಲಿ ಹೇಳಿರೋ ಹಾಗೆ ತಿರುಪತಿ ಕಾಡುಗಳಲ್ಲಿ ಮಾತ್ರ.